Log In
BREAKING NEWS >
ಅಮರನಾಥ ಯಾತ್ರೆ ವೇಳೆ ಕದನ ವಿರಾಮ ಮುಂದುವರೆಸಲು ಸರ್ಕಾರ ನಿರ್ಧಾರ: ಭದ್ರತಾ ಸಂಸ್ಥೆಗಳ ವಿರೋಧ....

ಕನ್ನಡದ ಮತ್ತೊಬ್ಬ ನಟಿ ತೆಲುಗಿಗೆ ಪಾದಾರ್ಪಣೆ

ಹೊಸ ಬಗೆಯ ಪ್ರಯೋಗಗಳಲ್ಲಿ ಅಭಿನಯಿಸಿ ಯಶಸ್ಸು ಗಳಿಸಿರುವ ಕನ್ನಡದ ನಟಿ ಶ್ರುತಿ ಹರಿಹರನ್ ಇದೀಗ ತೆಲುಗಿಗೆ ಪಾದಾರ್ಪಣೆ ಮಾಡುತ್ತಿದ್ದು ಇದರೊಂದಿಗೆ ಮತ್ತೊಬ್ಬ ಕನ್ನಡದ ನಟಿ ಟಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ.

ಇತ್ತೀಚೆಗಷ್ಟೇ ಕಿರಿಕ್ ಪಾರ್ಟಿ ಚಿತ್ರದ ರಶ್ಮಿಕಾ ಮಂದಣ್ಣ, ಶ್ರದ್ಧಾ ಶ್ರೀನಾಥ್ ಮತ್ತು ಸಂಯುಕ್ತ ಟಾಲಿವುಡ್ ಗೆ ಎಂಟ್ರಿಕೊಟ್ಟು ಯಶಸ್ಸು ಗಳಿಸಿದ್ದಾರೆ. ಇದೀಗ ಇದೇ ಸಾಲಿಗೆ ಕನ್ನಡದ ನಟಿ ಶ್ರುತಿ ಹರಿಹರನ್ ತೆಲುಗಿನಲ್ಲಿ ತಮ್ಮ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ.

ಕನ್ನಡ, ಮಲಯಾಳಂ ಹಾಗೂ ತಮಿಳು ಚಿತ್ರಗಳಲ್ಲಿ ನಟಿಸಿರುವ ಶ್ರುತಿ ಹರಿಹರನ್ ಇದೀಗ ತೆಲುಗಿನ ಚಿತ್ರದಲ್ಲೂ ನಟಿಸಲಿದ್ದಾರೆ. ತೆಲುಗು ಚಿತ್ರದ ಮೂಲಕ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಅಭಿನಯಿಸಿದ ಕೀರ್ತಿ ಅವರದ್ದಾಗುತ್ತದೆ.

ಬೇರೆ ಭಾಷೆ ಚಿತ್ರದಲ್ಲಿ ಅಭಿನಯಿಸುವುದು ಹೊಸದೊಂದು ಅನುಭವ ನೀಡುತ್ತದೆ ಎಂದು ಶ್ರುತಿ ಹರಿಹರನ್ ಹೇಳಿದ್ದಾರೆ. ಸದ್ಯ ಚಿತ್ರದ ಕುರಿತು ಯಾವುದೇ ಮಾಹಿತಿ ಹೊರ ಬಿದ್ದಿಲ್ಲ. 2018ರ ಜನವರಿಯಲ್ಲಿ ಚಿತ್ರದ ಕುರಿತು ಮಾಹಿತಿ ಹೊರ ಬೀಳಲಿದೆ.

ಶ್ರುತಿ ಹರಿಹರನ್ ಅಭಿನಯಿಸಿದ್ದ ತಾರಕ್ ಮತ್ತು ಉಪೇಂದ್ರ ಮತ್ತೇ ಬಾ ಚಿತ್ರಗಳು ತೆರೆಕಂಡಿದ್ದವು. ಇನ್ನು ವಿಜಯ್ ಪ್ರಸಾದ್ ನಿರ್ದೇಶನದ ಲೇಡಿಸ್ ಟೈಲರ್ ನಂತಹ ವಿಭನ್ನ ಚಿತ್ರಗಳಲ್ಲಿ ಅವರು ಅಭಿನಯಿಸುತ್ತಿದ್ದಾರೆ.

No Comments

Leave A Comment