Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಸರ್ಕಾರಿ ದಾಖಲೆಗಳ ಅನುಸಾರ ದತ್ತ ಪೀಠ, ಬಾಬಾ ಬುಡನ್ ದರ್ಗಾ ಬೇರೆ ಬೇರೆ: ಸಿಟಿ ರವಿ

ಚಿಕ್ಕಮಗಳೂರು: ದತ್ತ ಪೀಠ ಮತ್ತು ಬಾಬಾ ಬುಡನ್ ದರ್ಗಾ ಪ್ರತ್ಯೇಕ ತಾಣಗಳೆಂದು ಸರ್ಕಾರಿ ದಾಖಲೆಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಈ ದಾಖಲೆಗಳ ಆಧಾರದ ಮೇಲೆ ಸರ್ಕಾರ ದತ್ತ ಪೀಠ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಬಿಜೆಪಿ ಮುಖಂದ, ಶಾಸಕ ಸಿ.ಟಿ.ರವಿ ಹೇಳಿದರು.

“ಸುಪ್ರೀಂ ಕೋರ್ಟ್ ಸಹ ಈ ಸಮಸ್ಯೆಯನ್ನು ಸೌಹಾರ್ದವಾಗಿ ಪರಿಹರಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನಿಡಿದ್ದರೂ, ನ್ಯಾಯಮೂರ್ತಿ ನಾಗಮೋಹನ್ ಸಮಿತಿಯನ್ನು ರಾಜ್ಯ ಸರ್ಕಾರ  ನೇಮಕ ಮಾಡಿದ ನಾಲ್ಕು ತಿಂಗಳ ನಂತರ ಸಹ ಈ ಸಂಬಂಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ನಾವು ಅಧಿಕಾರಕ್ಕೆ ಬಂದರ ಮೂರು ತಿಂಗಳೊಳಗೆ ವಿವಾದವನ್ನು ಪರಿಹರಿಸುತ್ತೇವೆ, ಸರ್ಕಾರವು ಈ ಕೂಡಲೆ ದಾಖಲೆಗಳ ಆಧಾರವಾಗಿಟ್ಟುಕೊಂಡು ದತ್ತಪೀಠವನ್ನು ಹಿಂದೂಗಳಿಗೆ ಬಿಟ್ಟುಕೊಡಬೇಕು. ಅದೇ ರೀತಿ ನಾಗೇನಹಳ್ಳಿಗೆ ಬಾಬಾಬುಡನ್‌ ದರ್ಗಾವನ್ನು ಸ್ಥಳಾಂತರಿಸಬೇಕು ” ಎಂದು ಹೇಳಿದರು.

ಪಶ್ಚಿಮ ಪ್ರಾಂತ ಡಿಐಜಿ ಹೇಮಂತ್ ಮಿಂಬಾಳ್ಕರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,” ಆ ಅಹಿತಕರ ಘಟನೆ ನಡೆಯುವ ಮೊದಲು, ಎಲ್ಲರೂ ಶಾಂತಿಯುತವಾಗಿ ಸಾಗುತ್ತಿತ್ತು “ಎಂದರು.  ಭದ್ರತಾ ವ್ಯವಸ್ಥೆ ಕುರಿತಂತೆ ಅವರು ಮಾತನಾಡಲು ನಿರಾಕರಿಸಿದರು. “11,500 ಭಕ್ತರು ಅಂದು ಮಧ್ಯಾಹ್ನ ಪೀಠಕ್ಕೆ ಭೇಟಿ ನೀಡಿದ್ದರು. ಮುಜರಾಯಿ ಇಲಾಖೆಯು 30,ಸಾವಿರ ಜನರಿಗೆ ಪ್ರಸಾದ ವಿತರಣೆ ನಡೆಸಿತು” ಎಂದು ಉಪ ಕಮೀಷನರ್ ಎಂ.ಕೆ.ಶ್ರೀರಂಗಯ್ಯ ಹೇಳಿದ್ದಾರೆ.

ಚುನಾವಣೆ ಸನಿಹದಲ್ಲಿರುವಾಗಲೇ ಚಿಕ್ಕಮಗಳೂರು ದತ್ತಪೀಠ ವಿವಾದ ಮತ್ತೆ ಮುನ್ನಲೆಗೆ ಬಂದಿದೆ. ದತ್ತ ಜಯಂತಿ ಅಂಗವಾಗಿ ನಡೆದ ಶೋಭಾಯಾತ್ರೆಯ ವೇಳೆ ಈ ಬಾರಿ ಇಪ್ಪತ್ತೈದು ಸಾವಿರ ಭಕ್ತರು ಆಗಮಿಸಿದ್ದರು. ಕೆಲವು ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಭಕ್ತರಿಗೆ ವಾಹನಗಳ ವ್ಯವಸ್ಥೆ ಮಾಡಿದ್ದರು.  ಚೆನ್ನಗಿರಿ ಮಾದಾಲು ವಿರೂಪಾಕ್ಷಪ್ಪ ಹಾಗೂ ಕಡೂರಿನ ಬೆಳ್ಳಿ ಪ್ರಕಾಶ್ ಅವರ ಚಿತ್ರಗಳನ್ನು ಕೆಲವು ವಾಹನದಲ್ಲಿ ಅಂಟಿಸಲಾಗಿತ್ತು.

No Comments

Leave A Comment