Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಕೋಟೇಶ್ವರ: ಸಂಭ್ರಮದ ರಥೋತ್ಸವ

ಕೋಟೇಶ್ವರ: ಪುರಾಣ ಪ್ರಸಿದ್ಧ ಸಪ್ತಕ್ಷೇತ್ರಗಳಲ್ಲಿ ಒಂದಾದ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ರಥೋತ್ಸವ (ಕೊಡಿಹಬ್ಬ ) ನೆರೆದ ಸಾವಿರಾರು ಭಕ್ತರ ಸಮ್ಮುಖದಲ್ಲಿ ರವಿವಾರ ಸಂಭ್ರಮದಿಂದ ಜರಗಿತು.

ದೇವಸ್ಥಾನದಲ್ಲಿ ಗಣಪತಿ ಪೂಜೆಯೊಡನೆ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಉಸ್ತುವಾರಿಯನ್ನು ತಂತ್ರಿ ಹಾಗೂ ಸಮಿತಿಯ ಸದಸ್ಯ ಪ್ರಸನ್ನಕುಮಾರ್‌ ಐತಾಳ್‌ ವಹಿಸಿದ್ದರು. ಹಬ್ಬದ ಸಂಭ್ರಮದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ಮಾರ್ಕೋಡು, ಕಾರ್ಯನಿರ್ವಹಣಾಧಿಕಾರಿ ಗಣೇಶ್‌ ರಾವ್‌, ಸಮಿತಿಯ ಸದಸ್ಯರಾದ ಎನ್‌.ರಾಘವೇಂದ್ರ ರಾವ್‌ ನೇರಂಬಳ್ಳಿ, ವಿ. ರಾಜೀವ್‌ ಶೆಟ್ಟಿ , ಶಂಕರ ಚಾತ್ರಬೆಟ್ಟು, ಅಶೋಕ್‌ ಪೂಜಾರಿ, ಭಾರತಿ ದೇವಾಡಿಗ, ಸುಶೀಲಾ ಶೇಟ್‌, ಜ್ಯೋತಿ ಎಸ್‌.ನಾಯ್ಕ , ಪಟ್ಟಾಭಿ ರಾಮಚಂದ್ರ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಧರ ವಿ. ಕಾಮತ್‌, ಉದ್ಯಮಿ ಸುಧೀರ್‌ ಕುಮಾರ್‌ ಶೆಟ್ಟಿ ಮಾರ್ಕೋಡು, ಕೃಷ್ಣದೇವ ಕಾರಂತ ಕೋಣಿ, ಗ್ರಾ. ಪಂ.ಅಧ್ಯಕ್ಷೆ ಜಾನಕಿ ಬಿಲ್ಲವ, ಜಿ. ಪಂ. ಸದಸ್ಯೆ ಲಕ್ಷ್ಮೀ ಮಂಜು ಬಿಲ್ಲವ, ವಿವಿಧ ಸಂಘಟನೆಯ ಮುಖ್ಯಸ್ಥರು, ಮುಖಂಡರು , ಗಣ್ಯರು ಉಪಸ್ಥಿತರಿದ್ದರು.

ರಥೋತ್ಸವದಲ್ಲಿ ಸುಮಾರು 40ಸಾವಿರಕ್ಕೂ ಅಧಿಕ ಮಂದಿ ಭಕ್ತರು ಪಾಲ್ಗೊಂಡರು.

No Comments

Leave A Comment