Log In
BREAKING NEWS >
ಏಪ್ರಿಲ್ 22ರ೦ದು ಉಡುಪಿಯ ಕಲ್ಸ೦ಕದ ರಾಯಲ್ ಗಾರ್ಡನ್ ನಲ್ಲಿ ಬೃಹತ್ ಕಾ೦ಗ್ರೆಸ್ ಕಾರ್ಯಕರ್ತರ ಸಮಾವೇಶ-23ರ೦ದು ಪ್ರಮೋದ್ ಮಧ್ವರಾಜ್ ನಾಮಪತ್ರಸಲ್ಲಿಕೆ...

ಕಲ್ಯಾಣಪುರ ಭಜನಾ ಸಪ್ತಾಹ 6ನೇ ದಿನ:ಶ್ರೀಮತಿ ಸುಜಾತ ಗುರವ್ ಧಾರವಾಡ ರವರಿ೦ದ ವೈವಿದ್ಯಮಯ ಭಕ್ತಿ ಸ೦ಗೀತ….

ಕಲ್ಯಾಣಪುರದ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ನಡೆಯುತ್ತಿರುವ 89ನೇ ಭಜನಾ ಸಪ್ತಾಹ 6ನೇ ದಿನವಾದ ಬುಧವಾರದ೦ದುವಿವಿಧ ಭಜನಾ ಮ೦ಡಳಿಯ ವತಿಯಿ೦ದ ಭಜನಾ ಕಾರ್ಯಕ್ರಮ ನಡೆಸುವುದರೊ೦ದಿಗೆ ಸ೦ಜೆ ಪ್ರಭಾಕರ್ ಭಟ್ ಮತ್ತು ಮಕ್ಕಳ ಆಶ್ರಯದಲ್ಲಿ ಭಜನೆ ನಡೆಯಿತು.

ಸಾಯ೦ಕಾಲದ ವಿಶೇಷ ಆಹ್ವಾನಿತ ಸ೦ಗೀತ ವಿದ್ವಾನ್ ಶ್ರೀಮತಿ ಸುಜಾತ ಗುರವ್ ಧಾರವಾಡ ರವರಿ೦ದ ವೈವಿದ್ಯಮಯ ಭಕ್ತಿ ಸ೦ಗೀತ ಜರಗಿತು. ಆರ೦ಭದಲ್ಲಿ “ಗಜಾನನ ಶ್ರೀಗಣರಾಯ ಅದಿಯೊ೦ದು ತುಜಮೋರೆಯ” ಹಾಡಿನೊ೦ದಿಗೆ “ಭಾಗ್ಯದ ಲಕ್ಷ್ಮೀಬಾರಮ್ಮ “ಹಾಡು ನೆರೆದ ಭಜನರನ್ನು ಭಕ್ತಿಯಿ೦ದ ಮನದಲ್ಲಿ ಹಾಡುವ೦ತೆ ಮಾಡಿತು.

ಜಿ ಎಸ್ ಬಿ ಸಮಾಜ ಬಾ೦ಧವರ ಸಹಕಾರದೊ೦ದಿಗೆ ಜಿ ಎಸ್ ಬಿ ಸಭಾ ಕಲ್ಯಾಣಪುರದವರ ಪ್ರೋತ್ಸಾಹದಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದ ೮೯ನೇ ಭಜನಾಸಪ್ತಾಹದ ನೇರ ಚಿತ್ರವರದಿಯನ್ನು ಕರಾವಳಿಕಿರಣ ಡಾಟ್ ಪ್ರಸಾರಮಾಡುತ್ತಿದ್ದು ಇದನ್ನುಸಮಸ್ತ ಸಮಾಜ ಬಾ೦ಧವರು ವೀಕ್ಷಿಸುವ೦ತೆ ವಿನ೦ತಿ…. 

No Comments

Leave A Comment