Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವರಾತ್ರೆಯ "ಚ೦ಡಿಕಾ ಹೋಮ " ಕಾರ್ಯಕ್ರಮವು 19-10-2018ರ೦ದು ಜರಗಲಿದೆ....

ಭಾರತೀಯರೇ ನಮಗೆಲ್ಲಾ ಸ್ಫೂರ್ತಿ: ಇವಾಂಕ ಟ್ರಂಪ್

ಹೈದರಾಬಾದ್: ಭಾರತೀಯರೇ ನಮಗೆಲ್ಲಾ ಸ್ಫೂರ್ತಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಪುತ್ರಿ ಹಾಗೂ ಅಮೆರಿಕ ಅಧ್ಯಕ್ಷರ ಹಿರಿಯ ಸಲಹೆಗಾರ್ತಿ ಇವಾಂಕ ಟ್ರಂಪ್ ಅವರು ಮಂಗಳವಾರ ಹೇಳಿದ್ದಾರೆ.

ಇಂದು ಮುತ್ತಿನಗರಿಯಲ್ಲಿ ಅಮೆರಿಕ ಸಹಭಾಗಿತ್ವದಲ್ಲಿ ನಡೆಯುತ್ತಿರುವ ದಕ್ಷಿಣ ಏಷ್ಯಾದ ಮೊದಲ ಜಾಗತಿಕ ಉದ್ಯಮಶೀಲತಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಇವಾಂಕ, ಭಾರತ ಅಮೆರಿಕದ ನಿಜವಾದ ಸ್ನೇಹಿತ ಮತ್ತು ಅತ್ಯಂತ ವೇಗವಾಗಿ ಆರ್ಥಿಕ ಅಭಿವೃದ್ಧಿ ಸಾಧಿಸುತ್ತಿರುವ ದೇಶ ಎಂದರು.

70ನೇ ಸ್ವಾತಂತ್ರ್ಯೋತ್ಸವ ಆಚರಿಸಿಕೊಳ್ಳುತ್ತಿರುವ ಭಾರತೀಯರನ್ನು ನಾನು ಅಭಿನಂದಿಸುತ್ತೇನೆ. ಬಾಲ್ಯದಲ್ಲಿ ಚಾಹ ಮಾರುತ್ತಿದ್ದ ವ್ಯಕ್ತಿ ಇಂದು ಭಾರತದ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲದ ಪರಿವರ್ತನೆ ಅಥವಾ ಬದಲಾವಣೆ ಸಾಧ್ಯ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಇವಾಂಕ ಟ್ರಂಪ್ ಮೆಚ್ಚುಗೆ ವ್ಯಕ್ತಪಡಿಸಿದರು.

ಉದ್ಯಮ ಶೀಲತಾ ಸಮಾವೇಶಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಇವಾಂಕ, ಹಲವಾರು ವಿಷಯಗಳ ಬಗ್ಗೆ ಚರ್ಚಿಸಿದರು. ಅಲ್ಲದೇ ಭಾರತದ ಬಗ್ಗೆ ಮಾಹಿತಿಯನ್ನೂ ಪಡೆದುಕೊಂಡರು.ಇವಾಂಕ ಅವರು ಶ್ವೇತ ಭವನದ ಹಿರಿಯ ಅಧಿಕಾರಿಗಳ ನಿಯೋಗವೊಂದನ್ನು ಈ ಸಮಾವೇಶಕ್ಕೆ ಕರೆತಂದಿದ್ದು, ಶ್ವೇತ ಭವನ ಸಲಹೆಗಾರ್ತಿಯಾಗಿ ಇದು ಅವರ ಮೊದಲ ಭಾರತ ಭೇಟಿಯಾಗಿದೆ.

No Comments

Leave A Comment