Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಗುಂಡಿನ ಚಕಮಕಿ; ನಕ್ಸಲ್ ದಾಳಿಗೆ ಕರ್ನಾಟಕದ ಯೋಧ ಹುತಾತ್ಮ

ಮಹಾರಾಷ್ಟ್ರ: ನಕ್ಸಲ್ ಹಾಗೂ ಸಿಆರ್ ಪಿಎಫ್ ಯೋಧರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಕರ್ನಾಟಕದ ಯೋಧ ಮಂಜುನಾಥ್ ಹುತಾತ್ಮರಾಗಿರುವ ಘಟನೆ ಮಹಾರಾಷ್ಟ್ರದ ಗಢ್ ಚಿರೋಲಿಯ ಗ್ಯಾರಾಪತಿಯಲ್ಲಿ ನಡೆದಿದೆ.

ಗ್ಯಾರಾಪತಿಯಲ್ಲಿ ನಕ್ಸಲೀಯರ ವಿರುದ್ಧ ಸಿಆರ್ ಪಿಎಫ್ ಯೋಧರು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆಯಲ್ಲಿ ನಕ್ಸಲೀಯರು ನಡೆಸಿದ ಪ್ರತಿ ದಾಳಿಗೆ ಧಾರವಾಡದ ಮನಗುಂಡಿ ನಿವಾಸಿ ಮಂಜುನಾಥ್ ಹುತಾತ್ಮರಾಗಿದ್ದಾರೆ.

ಮಂಜುನಾಥ ಅವರು ಸಿಆರ್ ಪಿಎಫ್ ನ 113ನೇ ಬೆಟಾಲಿಯನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಈ ಘಟನೆ ನಿನ್ನೆ ನಡೆದಿದ್ದು, ಯೋಧ ಮಂಜುನಾಥ ಕುಟುಂಬದ ಆಕ್ರಂದನ ಮುಗಿಲುಮುಟ್ಟಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

No Comments

Leave A Comment