Log In
BREAKING NEWS >
ಜನವರಿ 25ಕ್ಕೆ ಬೆಳಿಗ್ಗೆ 9.30ಕ್ಕೆ ಉಡುಪಿಯ ಟಿ ಎ೦ ಎ ಪೈ ಹಿ೦ಬದಿಯಲ್ಲಿನ ಸ್ಥಳದಲ್ಲಿ ನೂತನ "ನಯಾಬ್ "ವಸತಿ ಸಮುಚ್ಚಾಯದ ಶಿಲಾನ್ಯಾಸ ಜರಗಲಿದೆ

ಕೆಸರೆರೆಚಾಟಕ್ಕೆ ಕೃತಜ್ಞನಾಗಿದ್ದೇನೆ ಏಕೆಂದರೆ ಕಮಲ ಅರಳುವುದು ಕೆಸರಲ್ಲೇ: ಗುಜರಾತ್ ನಲ್ಲಿ ಕೈ ವಿರುದ್ಧ ಮೋದಿ ವಾಗ್ದಾಳಿ

ಕಛ್: ವಿಧಾನಸಭಾ ಚುನಾವಣೆಗೆ ಸಜ್ಜುಗೊಂಡಿರುವ ಗುಜರಾತ್ ನ ಕಛ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದು, ಕಾಂಗ್ರೆಸ್ ನವರು ಕೆಸೆರೆರೆಚಾಟ ನಡೆಸುತ್ತಿದ್ದಾರೆ ಇದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ ಏಕೆಂದರೆ ಕಮಲ ಅರಳುವುದು ಕೆಸರಿನಲ್ಲೇ ಎಂದು ಟಾಂಗ್ ನೀಡಿದ್ದಾರೆ.
ಆಶಾಪುರ ಮಾತಾ ದೇವಾಲಯಕ್ಕೆ ಭೇಟಿ ನೀಡಿದ ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ಮೋದಿ ಕಚ್ಛೀ ಭಾಷೆಯಲ್ಲೇ ಭಾಷಣ ಮಾಡಿದ್ದು, ಆಶಾಪುರ ದೇಶಿಯ ಬಳಿ ಪ್ರಾರ್ಥಿಸಿ ಬಂದಿದ್ದು, ಈಗ ಜನತಾ ಜನಾರ್ದನನ ಬಳಿ ಆಶೀರ್ವಾದ ಬೇಡುತ್ತಿದ್ದೇವೆ, ಕಛ್ ಜನತೆಯ ಪ್ರೀತಿ ವಿಶ್ವಾಸಗಳಿಗೆ ಆಭಾರಿಯಾಗಿದ್ದೇನೆ, ಜನರೊಂದಿಗೆ ಸಂವಾದ ನಡೆಸುವುದು ನನಗೆ ಅತ್ಯಂತ ಸಂತಸ ನೀಡುತ್ತದೆ. ನನ್ನ ಜೀವನದ ಪ್ರತಿಯೊಂದು ಕ್ಷಣವನ್ನೂ 125 ಕೋಟಿ ಭಾರತೀಯರ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದೇನೆ ಎಂದು ಹೇಳಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಗುಜರಾತ್ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸಿದ್ದೀರಿ, ಇದೇ ಕಾರಣದಿಂದ ಗುಜರಾತ್ ಹಿಂದುಳಿಯುವಂತಾಗಿತ್ತು, ಇದಕ್ಕಾಗಿ ನಿಮ್ಮನ್ನು ರಾಜ್ಯದ ಜನತೆ ಎಂದಿಗೂ ಕ್ಷಮಿಸುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
No Comments

Leave A Comment