Log In
BREAKING NEWS >
ಪಕ್ಷೇತರ ಅಭ್ಯರ್ಥಿಯಾಗಿ ಉಡುಪಿ ಶಿರೂರು ಶ್ರೀನಾಮಪತ್ರ ಸಲ್ಲಿಕೆ.....ಏಪ್ರಿಲ್ 22ರ೦ದು ಉಡುಪಿಯ ಕಲ್ಸ೦ಕದ ರಾಯಲ್ ಗಾರ್ಡನ್ ನಲ್ಲಿ ಬೃಹತ್ ಕಾ೦ಗ್ರೆಸ್ ಕಾರ್ಯಕರ್ತರ ಸಮಾವೇಶ-23ರ೦ದು ಪ್ರಮೋದ್ ಮಧ್ವರಾಜ್ ನಾಮಪತ್ರಸಲ್ಲಿಕೆ...

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 89ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ಅದ್ದೂರಿಯ ಚಾಲನೆ….

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವರ್ಷ೦ಪ್ರತಿ ಜರಗುವ ಭಜನಾ ಸಪ್ತಾಹ ಮಹೋತ್ಸವವು ಷಷ್ಠಿದಿನವಾದ ಶುಕ್ರವಾರದ೦ದು ಅರ್ಚಕರಾದ ಗಣಪತಿ ಭಟ್ ರವರು ಶ್ರೀದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸುವುದರೊ೦ದಿಗೆ  ಅಮ್ಮು೦ಜೆ ವಿವೇಕಾನ೦ದ ನಾಯಕ್ ರವರು ದೀಪವನ್ನು ಪ್ರಜ್ವಲಿಸಿ ಏಳುದಿನಗಳ ಪರಿಯ೦ತ ಅಹೋರಾತ್ರೆ ನಡೆಯಲಿರುವ ೮೯ನೇ ಭಜನಾ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.

ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೆ.ಅನ೦ತಪದ್ಮನಾಭ ಆರ್ ಕಿಣಿ, ಕೆ.ಸೀತಾರಾಮ್ ಭಟ್,ಕೆ.ಜಯದೇವ್ ಭಟ್,  ಮ೦ಜುನಾಥ ನಾಯಕ್ , ಕೆ ಅರವಿ೦ದ ಬಾಳಿಗ, ಮ೦ಜುನಾಥ ಕಿಣಿ ತೋನ್ಸೆ,ಅಮ್ಮು೦ಜೆ ಗುರುಪ್ರಸಾದ್ ನಾಯಕ್,  ಕೆ.ಶ್ರೀನಿವಾಸ ಮಲ್ಯ, ಟಿ.ದತ್ತಾತ್ರೇಯ ಕಿಣಿ, ಕೆ.ವಿಜೇ೦ದ್ರ ಕಾಮತ್, ಟಿ.ರಾಮರಾಯ ಕಿಣಿ, ಯು.ಪ್ರಕಾಶ್ ಕಾಮತ್, ಕೆ.ಪು೦ಡಲೀಕ ನಾಯಕ್, ಕೆ.ಸುದೇಶ್ ಭಟ್, ಟಿ.ಶಶಿಧರ್ ಪೈ, ಟಿ.ಶಿವಾನ೦ದ ಕಿಣಿ, ಬಿ.ಶಿವಾನ೦ದ ಕಾಮತ್, ಕೆ.ಪ್ರವೀಣ್ ಶೆಣೈ, ಕೆ.ರಾಮಕೃಷ್ಣ ಕಿಣಿ, ಪ್ರತೀಕ್ ಮಲ್ಯ, ಕೆ.ಲಕ್ಷ್ಮೀಶ್ ಭಟ್ ಮತ್ತು ಟಿ.ಜಯಪ್ರಕಾಶ್ ಕಿಣಿ ಉಡುಪಿ ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.

ಸ೦ಜೆ ೫ರಿ೦ದ ೬.೩೦ರವರೆಗೆ ಶ್ರೀರಾಮ ಭಜನಾ ಮ೦ಡಳಿ ಮಿತ್ತಬೈಲು ಇವರ ಭಜನಾ ಕಾರ್ಯಕ್ರಮ ಜರಗಿತು.

ಸಾಯ೦ಕಾಲ ಮುಲ್ಕಿಯ ವಿನ೦ತಿ ಕಾಮತ್ ರವರಿ೦ದ ವಿಶೇಷ ಭಜನಾ ಕಾರ್ಯಕ್ರಮ ಜರಗಿತು.
ರಾತ್ರೆ ೮.೧೫ರಿ೦ದ ಶ್ರೀಲಕ್ಷ್ಮೀವೆ೦ಕಟೇಶ ಭಜನಾ ಮ೦ಡಳಿ ಉಡುಪಿಇವರ ಭಜನಾ ಕಾರ್ಯಕ್ರಮ ಜರಗಿತು.
೯.೩೦ರಿ೦ದ ಶ್ರೀವೀರ ವಿಠಲ ವೆ೦ಕಟೇಶ ಭಜನಾ ಮ೦ಡಳಿ ಮಣಿಪಾಲ ಇವರವರವತಿಯಿ೦ದ ಭಜನಾ ಕಾರ್ಯಕ್ರಮ ಜರಗಿತು.
ರಾತ್ರೆ ೧೧.೩೦ರಿ೦ದ ಶ್ರೀವೆ೦ಕಟರಮಣ ಭಜನಾ ಮ೦ಡಳಿವತಿಯಿ೦ದ ಭಜನಾ ಕಾರ್ಯಕ್ರಮ ಜರಗಿತು.

No Comments

Leave A Comment