Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಶಿಮ್ಲಾ: ಲೆಫ್ಟಿನೆಂಟ್‌ ಕರ್ನಲ್‌ ಪುತ್ರಿಯ ರೇಪ್‌: ಕರ್ನಲ್‌ ಸೆರೆ

ಶಿಮ್ಲಾ : ಇಲ್ಲಿನ ಆರ್ಮಿ ಟ್ರೇನಿಂಗ್‌ ಕಮಾಂಡ್‌ (ಆಆರ್‌ಟಿಎಸಿ) ನಲ್ಲಿ ನಿಯೋಜಿಸಲ್ಪಟ್ಟಿದ್ದ ಲೆಫ್ಟಿನೆಂಟ್‌ ಕರ್ನಲ್‌ ಓರ್ವರ ಪುತ್ರಿಯನ್ನು 56ರ ಹರೆಯದ ಆರ್ಮಿ ಕರ್ನಲ್‌ ಓರ್ವರು ರೇಪ್‌ ಮಾಡಿದ್ದು ಆರೋಪಿ ಅತ್ಯಾಚಾರಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

21ರ ಹರೆಯದ ಲೆಫ್ಟಿನೆಂಟ್‌ ಕರ್ನಲ್‌ ಅವರ ಪುತ್ರಿ ತನ್ನ ಮೇಲೆ ಅತ್ಯಾಚಾರ ಎಸಗಿದ ಆರ್ಮಿ ಕರ್ನಲ್‌ ವಿರುದ್ಧ ಪೊಲೀಸರಿಗೆ ದೂರು ನೀಡಿದ ಪ್ರಕಾರ ಆರೋಪಿ ಕರ್ನಲ್‌ ನನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಅತ್ಯಾಚಾರಕ್ಕೆ ಗುರಿಯಾದ ಲೆ| ಕರ್ನಲ್‌ ಪುತ್ರಿಯ ಹೇಳಿಕೆಯನ್ನು ದಾಖಲಿಸಿಕೊಂಡು ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕ ಆರೋಪಿ ಅತ್ಯಾಚಾರಿ ವಿರುದ್ಧ ಪೊಲೀಸರು ಆರ್ಮಿ ಕರ್ನಲ್‌ನನ್ನು ಬಂಧಿಸಿ, ಎಫ್ಐಆರ್‌ ದಾಖಲಿಸಿಕೊಂಡು,  ತನಿಖೆ ನಡೆಸುತ್ತಿದ್ದಾರೆ.

ಪೊಲೀಸ್‌ ಸುಪರಿಂಟೆಂಡೆಂಟ್‌ ಸೌಮ್ಯ ಸಾಂಬಶಿವನ್‌ ಅವರು ಈ ಪ್ರಕರಣದಲ್ಲಿ ಆರೋಪಿಯ ಬಂಧನ ಹಾಗೂ ಎಫ್ಐಆರ್‌ ದಾಖಲಾಗಿರುವುದನ್ನು ದೃಢೀಕರಿಸಿದ್ದಾರೆ. ಆದರೆ ಆರೋಪಿ ಕರ್ನಲ್‌ನ ಗುರುತು ಬಹಿರಂಗಪಡಿಸಲು ಅವರು ನಿರಾಕರಿಸಿದ್ದಾರೆ.

ಅತ್ಯಾಚಾರ ಆರೋಪಿಯನ್ನು ಇಂದು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದವರು ಹೇಳಿದ್ದಾರೆ.

No Comments

Leave A Comment