Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ(ರಿ) ಉಡುಪಿ ವಿಪ್ರ ವಲಯ ಪರ್ಕಳ ಇವರ ವಾರ್ಷಿಕ ಮಹಾಸಭೆ-ಪ್ರತಿಭಾ ಪುರಸ್ಕಾರ-ಸನ್ಮಾನ

ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ(ರಿ) ಉಡುಪಿ ವಿಪ್ರ ವಲಯ ಪರ್ಕಳ ಇವರ ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ,ಸನ್ಮಾನ ಸಮಾರಂಭವು ವಲಯಾಧ್ಯಕ್ಷರಾದ ಮಂಜುನಾಥ ಉಪಾಧ್ಯಾಯರ ಅಧ್ಯಕ್ಷತೆಯಲ್ಲಿ ಪರ್ಕಳ ಶ್ರೀ ಮಹಾಲಿಂಗೇಶ್ವರ   ದೇವಸ್ಥಾನದಲ್ಲಿ ನಡೆಯಿತು

 ಮುಖ್ಯ ಅತಿಗಳಾಗಿ ಕಟೀಲು ದೇವಸ್ಥಾನದ ಅರ್ಚಕರಾದ ಲಕ್ಷ್ಮೀನಾರಾಯಣ ಅಸ್ರಣ್ಣರು, ಬ್ರಾಹ್ಮಣರು ಕೂಡು ಕುಟುಂಬದೊಂದಿಗೆ ಜೀವನ ಪದ್ಧತಿಯನ್ನು ನಡೆಸಬೇಕು.ಧನ ಸಂಪಾದನೆಗಿಂತಲೂ ಭಾವನೆಗಳು ಹಾಗೂ ಸಂಬಂಧಗಳು ಮುಖ್ಯ.ಹಿರಿಯರು ಮನೆಯಲ್ಲಿ ಇದ್ದರೆ ಮಕ್ಕಳಿಗೆ ಸಂಸ್ಕಾರವನ್ನು ಕೊಟ್ಟು ಉತ್ತಮ ಚಿಂತನೆ ಹಾಗೂ ಧಾರ್ಮಿಕ ಭಾವನೆಯನ್ನು ಬೆಳೆಸಬಹುದು.ಈ ನಿಟ್ಟಿನಲ್ಲಿ ಇಂದು ಹಿರಿಯ ದಂಪತಿಗಳಿಗೆ ಸನ್ಮಾನಿಸಿದ್ದು ಸಾರ್ಥಕವಾಗಿದೆ ಎಂದರು.

  ಇನ್ನೊಬ್ಬರು ಮುಖ್ಯ ಅಥಿತಿಗಳಾದ ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ ಗೌರವಾಧ್ಯಕ್ಷರಾದ ವೇಣುಗೋಪಾಲ್ ಮುಳ್ಳೇರಿಯಾ ಇವರು ಬ್ರಾಹ್ಮಣ ಸಂಘಟನೆಯು ಯಾವುದೇ ಸಮಾಜದ ವಿರುದ್ಧ ಎತ್ತಿಕಟ್ಟಲು ಇರುವುದಲ್ಲ,ನಮ್ಮ ಪರಂಪರೆಗಳು ,ಸಂಪ್ರದಾಯಗಳು ಮತ್ತು ಆಚರಣೆಗಳನ್ನು ಮುಂದುವರಿಸಲು ನಮ್ಮಲ್ಲಿ ಒಗ್ಗಟ್ಟು ಬೇಕು.ಈ ಬಗ್ಗೆ ಯುವಕರಲ್ಲಿ   ಜಾಗೃತಿಯನ್ನು ಮೂಡಿಸುವ ಕೆಲಸ ಸಂಘಟನೆಗಳಿಂದ ನಡೆಯ ಬೇಕು.ಯುವ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಬ್ರಾಹ್ಮಣ್ಯವನ್ನು ಉಳಿಸಿಕೊಳ್ಳ ಬೇಕು ಎಂದು ಹೇಳಿದರು.

 ಈ ಸಭೆಯಲ್ಲಿ ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಸಂಘಟನಾ ಕಾರ್ಯದರ್ಶಿಗಳಾದ ಕುದಿ ಶ್ರೀನಿವಾಸ ಭಟ್,ವಲಯದ ಗೌರವಾಧ್ಯಕ್ಷರಾದ ಶ್ರೀನಿವಾಸ ಉಪಾಧ್ಯಾಯರು ಶುಭ ಹಾರೈಸಿದರು.ವಲಯದ 50 ವರ್ಷ ಪೂರೈಸಿದ ಹಿರಿಯ 6 ಮಂದಿ  ದಂಪತಿಗಳಿಗೆ ಸನ್ಮಾನಿಸಲಾಯಿತು ಹಾಗೂ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.

ವಲಯಾಧ್ಯಕ್ಷರಾದ ಮಂಜುನಾಥ ಉಪಾಧ್ಯಾಯರು ಸ್ವಾಗತಿಸಿ,ಗಣಪತಿ ಶಾಸ್ತ್ರಿಗಳು ಕಾರ್ಯಕ್ರಮ ನಿರ್ವಹಿಸಿ, ವಲಯ ಪ್ರಧಾನ ಕಾರ್ಯದರ್ಶಿಗಳಾದ ಮುರಳೀಧರ ನಕ್ಷತ್ರಿ ಧನ್ಯವಾದ ನೀಡಿದರು.

Comments

Leave A Comment