Log In
BREAKING NEWS >
ಉಡುಪಿಯ ಶ್ರೀಶಿರೂರು ಶ್ರೀಗಳು ಹರಿಪಾದಕ್ಕೆ-ಇನ್ನಿಲ್ಲವಾದರು ಶ್ರೀಗಳು-ಉಡುಪಿಯ ಶ್ರೀಕೃಷ್ಣಮಠ ಹಾಗೂ ಶಿರೂರು ಮಠಕ್ಕೆ ಬಿಗುಭದ್ರತೆ

ಕಲಬುರಗಿ: ಟ್ಯಾಂಕರ್ ಗೆ ಕ್ರೂಸರ್ ಡಿಕ್ಕಿ, 5 ಸಾವು, 7 ಮಂದಿ ಗಂಭೀರ!

ಕಲಬುರಗಿ: ಕಲಬುರಗಿಯಲ್ಲಿ ಮಂಗಳವಾರ ಬೆಳಗ್ಗೆ ಭೀಕರ ಅಪಘಾತವಾಗಿದ್ದು, ಇಂಧನ ಟ್ಯಾಂಕರ್ ಗೆ ಕ್ರೂಸರ್ ಡಿಕ್ಕಿಹೊಡೆದ ಪರಿಣಾಮ ಕ್ರೂಸರ್ ನಲ್ಲಿದ್ದ 5 ಮಂದಿ ಸ್ಥಳದಲ್ಲೇ ಸಾವನ್ನಪ್ಪಿ, 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರ ಪೈಕಿ ಇಬ್ಬರು ಯುವಕರು ಕೂಡ ಇದ್ದು, ಎಲ್ಲರೂ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಬರ್ಸಿ ಗ್ರಾಮದ ನಿವಾಸಿಗಳೆಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಕ್ರೂಸರ್ ನಲ್ಲಿದ್ದವೆರೆಲ್ಲರೂ ಕಲಬುರಗಿಯ ರತ್ಕಲ್ ಗ್ರಾಮದ  ರೇವಣ ಸಿದ್ದೇಶ್ವರ ದೇಗುಲದಲ್ಲಿ ಆಯೋಜನೆಯಾಗಿದ್ದ ಮದುವೆ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದರು. ಈ ವೇಳೆ ಔರಾದ್ ತಾಲೂಕಿನ ಬಳಿ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಕ್ರೂಸರ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಇಂಧನ  ಟ್ಯಾಂಕರ್ ಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಕ್ರೂಸರ್ ನಲ್ಲಿದ್ದ ವೀರಭದ್ರ (55), ಸಮಾಧನ್ (40), ಬಾಬು ರಾವ್ (35), ಉಜ್ವಲ್ (14) ಮತ್ತು ಪ್ರಜ್ವಲ್ (13) ಸ್ಥಳದಲ್ಲೇ ಸಾವನ್ನಪ್ಪಿದ್ದು, ಇತರೆ ಏಳು ಮಂದಿ ಗಂಭೀರವಾಗಿ  ಗಾಯಗೊಂಡಿದ್ದಾರೆ. ಅಪಘಾತಕ್ಕೆ ಕ್ರೂಸರ್ ವಾಹನದ ಅತಿಯಾದ ವೇಗವೇ ಕಾರಣ ಎಂದು ಹೇಳಲಾಗಿದೆ.

ಗಾಯಾಳುಗಳನ್ನು ಸಮೀಪದ ಯುನೈಟೆಡ್ ಆಸ್ಪತ್ರೆ ಮತ್ತು ಕಲಬುರದಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಲಬುರಗಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈಶಾನ್ಯ ಭಾಗದ ಐಜಿಪಿ ಅಲೋಕ್ ಕುಮಾರ್  ಮತ್ತು ಕಲಬುರಗಿ ಎಸ್ಪಿ ಶಶಿಕುಮಾರ್ ಅವರು ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

No Comments

Leave A Comment