Log In
BREAKING NEWS >
ವೇತನ ಹೆಚ್ಚಳ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 30 ಮತ್ತು 31ರಂದು ಬ್ಯಾಂಕ್‌ ನೌಕರರು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ....

ಶ್ರೀಲಂಕಾ ಪ್ರಧಾನಿ ರನೀಲ್ ವಿಕ್ರಮ ಸಿಂಘೆ ಕೊಲ್ಲೂರಿಗೆ ಭೇಟಿ

ಕುಂದಾಪುರ: ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಇಂದು ಉಡುಪಿ ಜಿಲ್ಲೆ ಕುಂದಾಪುರದ ಪ್ರಸಿದ್ಧ ಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಇಂದು ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಅಲ್ಲಿಂದ ಹೆಲಿಕಾಪ್ಟರ್ ಮುಖೇನ ಕೊಲ್ಲೂರಿಗೆ ತೆರಳಿದರು.

ಶ್ರೀಲಂಕಾ ಪ್ರಧಾನಿ ಭೇಟಿಯ ಹಿನ್ನೆಲೆಯಲ್ಲಿ ಕೊಲ್ಲೂರಿನಲ್ಲಿ ವ್ಯಾಪಕ ಭದ್ರತೆ ಕೈಗೊಳ್ಳಲಾಗಿತ್ತು. ಶ್ರೀಲಂಕಾ ಭದ್ರತಾ ಪಡೆ ಹಾಗೂ ಸ್ಥಳೀಯ ಪೋಲೀಸರು ಶ್ರೀಲಂಕಾ ಪ್ರಧಾನಿ ಕಾರ್ಯಕ್ರಮದ ಭದ್ರತಾ ಉಸ್ತುವಾರಿ ನೋಡಿಕೊಂಡರು.

ರಾಜಾಸ್ಥಾನ ಮುಖ್ಯಮಂತ್ರಿಗಳ ಉಡುಪಿ ಭೇಟಿ

ರಾಜಾಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ಇಂದು ಉಡುಪಿಯ ಶ್ರಿಕೃಷ್ಣ ಮಠಕ್ಕೆ ಭೇಟಿ ನೀಡೀದರು.”ಶ್ರೀ ಕೃಷ್ಣ ಮಠಕ್ಕೆ ಇದು ನನ್ನ ಪ್ರಥಮ ಭೇಟಿಯಾಗಿದೆ. ಪರ್ಯಾಯ ಶ್ರೀಗಳಾದ ವಿಶ್ವೇಶತೀರ್ಥರ ಐದನೇ ಪರ್ಯಾಯದಲ್ಲಿ ಭಾಗಿಯಾಗಿರುವುದು ನನ್ನ ಪುಣ್ಯ.” ಎಂದು ಅವರು ತಮ್ಮ ಸಂತಸ ಹಂಚಿಕೊಂಡರು.

ಇದಾದ ನಂತರ ಅವರು ಸಹ ಕೊಲ್ಲೂರಿಗೆ ಪ್ರಯಾಣ ಬೆಳೆಸಿ ಅಲ್ಲಿ ಮೂಕಾಂಬಿಕೆಯ ದರ್ಶನ ಪಡೆದರು. “ದೇವರು ಬಯಸದೆ ಯಾರೂ ದೇವಾಲಯಕ್ಕೆ ತೆರಳಲು ಸಾದ್ಯವಿಲ್ಲ. ನಾನು ಕೊಲ್ಲೂರಿಗೆ ಬರಬೇಕೆಂದು ಹಲವಾರು ಬಾರಿ ಪ್ರಯತ್ನಿಸಿದರೂ ಇದುವರೆಗೂ ಕೈಗೂಡಿರಲಿಲ್ಲ. ಆದರೆ ಇದೀಗ ತಾಯಿಯ ದರ್ಶನ ಪಡೆದು ಕೃತಾರ್ಥಳಾದೆ” ರಾಜೆ ಹೇಳಿದ್ದಾರೆ.

No Comments

Leave A Comment