Log In
BREAKING NEWS >
ನಾಡಿನ ಸಮಸ್ತ ಜನತೆಗೆ, ನಮೆಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನಾಗರ ಪ೦ಚಮಿ ಹಾಗೂ ನೇ ಸ್ವಾತ೦ತ್ರೋತ್ಸವದ ಶುಭಾಶಯಗಳು....

ನಟಿ ದೀಪಿಕಾ ತಲೆಗೆ ರೂ.10 ಕೋಟಿ ಇನಾಮು ಘೋಷಿಸಿದ್ದ ಬಿಜೆಪಿ ನಾಯಕನ ವಿರುದ್ಧ ಎಫ್ಐಆರ್ ದಾಖಲು

ಗುರುಗ್ರಾಮ: ಪದ್ಮಾವತಿ ಚಿತ್ರ ವಿವಾದ ಕುರಿತಂತೆ ನಟಿ ದೀಪಿಕಾ ತಲೆಗೆ ರೂ.10 ಕೋಟಿ ಬಹುಮಾನ ಘೋಷಣೆ ಮಾಡಿದ್ದ ಬಿಜೆಪಿ ನಾಯಕರ ವಿರುದ್ದ ಮಂಗಳವಾರ ಎಫ್ಐಆರ್ ದಾಖಲಾಗಿದೆ.

ಬಿಜೆಪಿ ನಾಯಕ ಸೂರತ್ ಪಾಲ್ ಅಮು ವಿರುದ್ಧ ಗುರುಗ್ರಾಮ ಮೂಲದ ವ್ಯಕ್ತಿಯೊಬ್ಬರು ಎಫ್ಐಆರ್ ದಾಖಲಿಸಿದ್ದಾರೆಂದು ತಿಳಿದುಬಂದಿದೆ.

ಪದ್ಮಾವತಿ ಚಿತ್ರ ವಿವಾದ ಕುರಿತಂತೆ ಈ ಹಿಂದೆ ರಾಷ್ಟ್ರೀಯ ಮಹಿಳಾ ಆಯೋಗ ಹರಿಯಾಣ ಡಿಜಿಪಿಯವರಿಗೆ ಪತ್ರವೊಂದನ್ನು ಬರದಿತ್ತು. ಪತ್ರದಲ್ಲಿ ಬಿಜೆಪಿ ನಾಯಕ ಅಮು ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿತ್ತು.

ಭಾನುವಾರವಷ್ಟೇ ಹೇಳಿಕೆ ನೀಡಿದ್ದ ಅಮು ಅವರು ಪದ್ಮಾವತಿ ಚಿತ್ರ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ, ನಟಿ ದೀಪಿಕಾ ಹಾಗೂ ರಣ್’ವೀರ್ ಸಿಂಗ್ ಅವರ ತಲೆಯನ್ನು ಕಡಿದವರಿಗೆ ರೂ.10 ಕೋಟಿ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದರು.

No Comments

Leave A Comment