Log In
BREAKING NEWS >
ವಿಶ್ವಾಸಮತದ ಅಗ್ನಿಪರೀಕ್ಷೆ ಗೆದ್ದ ಗೋವಾ ಸಿಎಂ ಪ್ರಮೋದ್ ಸಾವಂತ್...ಡಯಾನ ಸಮೂಹ ಸ೦ಸ್ಥೆಯ ಪಾಲುದಾರರಾದ ಎ೦.ಯಶವ೦ತ ಪೈ ನಿಧನ...

ಭಾರತದ ಮಾನುಷಿ ಚಿಲ್ಲರ್‌ ವಿಶ್ವ ಸುಂದರಿ/India’s Manushi Chhillar crowned Miss World 2017

ಬೀಜಿಂಗ್‌: ಚೀನದಲ್ಲಿ ನಡೆದ ವಿಶ್ವಸುಂದರಿ ಸ್ಪರ್ಧೆಯಲ್ಲಿ ಭಾರತದ ಮಾನುಷಿ ಚಿಲ್ಲರ್‌ ವಿಶ್ವಸುಂದರಿ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾಳೆ. ಇದ ರೊಂದಿಗೆ ಭಾರತದ ಐವರು ವಿಶ್ವ ಸುಂದರಿ ಪಟ್ಟಕ್ಕೇರಿದ ಹೆಗ್ಗಳಿಕೆ ಪಡೆದಂತಾಗಿದೆ. 17 ವರ್ಷಗಳ ಹಿಂದೆ 2000ನೇ ಇಸ್ವಿಯಲ್ಲಿ ಪ್ರಿಯಾಂಕಾ ಛೋಪ್ರಾ ವಿಶ್ವಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದರು. 20 ವರ್ಷದ ಮಾನುಷಿ ಹರ್ಯಾಣ ಮೂಲ ದವರಾಗಿದ್ದು, ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾರೆ. ಈಕೆಯ ಪೋಷಕರೂ ವೈದ್ಯರು.

ಮಾನುಷಿ ಕೂಚಿಪುಡಿ ನೃತ್ಯ ಪರಿಣಿತೆ. ಅಷ್ಟೇ ಅಲ್ಲ, ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದು, ಪ್ರಾಜೆಕ್ಟ್ ಶಕ್ತಿ ಎಂಬ ಕಾರ್ಯಕ್ರಮದ ಅಡಿಯಲ್ಲಿ ಮಹಿಳೆಯರಲ್ಲಿ ಋತುಸ್ರಾವದ ಸಮಯದಲ್ಲಿ ನೈರ್ಮ ಲ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. 20 ಗ್ರಾಮಗಳಿಗೆ ಭೇಟಿ ನೀಡಿ, 5000 ಮಹಿಳೆಯರಲ್ಲಿ ಜಾಗೃತಿ ಮೂಡಿಸಿದ್ದಾರೆ.

ಈ ಹಿಂದೆ ಫೆಮಿನಾ ಮಿಸ್‌ ಇಂಡಿಯಾ ವರ್ಲ್ಡ್ 2017 ರಲ್ಲೂ ಮಾನುಷಿ ಗೆದ್ದಿದ್ದಳು. ಚೀನಾ ಸಾನ್ಯಾ ನಗರದಲ್ಲಿ ನಡೆದ ಸಮಾರಂಭದಲ್ಲಿ 2016ರ ಪೋಟೋì ರಿಕೋದ ಸ್ಟೆಫಾನಿ ಡೆಲ್‌ ವಾಲೆಯಿಂದ ಕಿರೀಟವನ್ನು ಮಾನುಷಿ ಮುಡಿಗೇರಿಸಿಕೊಂಡಿದ್ದಾರೆ.

India’s Manushi Chhillar was on Saturday crowned as Miss World 2017 at a grand event held in Sanya in China.

The 20-year-old medical student from Haryana had won Femina Miss India World 2017 in May this year.

Manushi had made it to the top 5 along with contestants from England, France, Kenya and Mexico.

The first and the second runners-up were Miss England Stephanie Hill and Miss Mexico Andrea Meza.

The coveted title was last won by Priyanka Chopra for India in 2000, a year after Yukta Mookhey had made the country proud.

In 1997, Diana Hayden had bagged the title, while Aishwarya Rai had the honours in 1994.

Reita Faria was the first Indian to win the crown in the 1966.

No Comments

Leave A Comment