Log In
BREAKING NEWS >
ನಾಡಿನ ಸಮಸ್ತ ಜನತೆಗೆ, ನಮೆಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನಾಗರ ಪ೦ಚಮಿ ಹಾಗೂ ನೇ ಸ್ವಾತ೦ತ್ರೋತ್ಸವದ ಶುಭಾಶಯಗಳು....

ಎನ್‌ಕೌಂಟರ್‌: ಐವರು ಉಗ್ರರು ಮಟಾಶ್‌, ಕಮಾಂಡೋ ಹುತಾತ್ಮ

ಜಮ್ಮು ಕಾಶ್ಮೀರ: ಉತ್ತರ ಕಾಶ್ಮೀರ ಜಿಲ್ಲೆಯ ಬಂಡಿಪೋರಾದಲ್ಲಿ ಇಂದು ಶನಿವಾರ ಸಂಜೆ ಆರಂಭಗೊಂಡು ಈಗಲೂ ಮುಂದುವರಿದಿರುವ ಎನ್‌ಕೌಂಟರ್‌ನಲ್ಲಿ ಐವರು ಉಗ್ರರು ಹತರಾಗಿದ್ದಾರೆ; ಓರ್ವ ಭಾರತೀಯ ವಾಯು ಪಡೆ ಕಮಾಂಡೋ ಹುತಾತ್ಮರಾಗಿದ್ದಾರೆ ಎಂದು ಸೇನೆ ತಿಳಿಸಿದೆ.

ಬಂಡಿಪೋರಾದ ನಿರ್ದಿಷ್ಟ ತಾಣವೊಂದರಲ್ಲಿ ಉಗ್ರರು ಕಂಡುಬಂದಿರುವುದಾಗಿ ದೊರಕಿದ ಗುಪ್ತಚರ ಮಾಹಿತಿಯನ್ನು ಆಧರಿಸಿ ಇಂದು ಸಂಜೆ ಆ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರಿದು ಶೋಧ ಕಾರ್ಯಾಚರಣೆ ಕೈಗೊಂಡಾಗ ಉಗ್ರರು ಗುಂಡಿನ ಕಾಳಗಕ್ಕೆ ಮುಂದಾದರು.

ಭೀಕರವಾಗಿ ನಡೆದ ಗುಂಡಿನ ಕಾಳಗದಲ್ಲಿ ಐವರು ಉಗ್ರರು ಹತರಾದರು; ವಾಯುಪಡೆಯ ಓರ್ವ ಕಮಾಂಡೋ ಹುತಾತ್ಮರಾದರು ಎಂದು ಸೇನಾ ವಕ್ತಾರ ತಿಳಿಸಿದರು.

ಶ್ರೀನಗರದ ಹೊರವಲಯದಲ್ಲಿನ ಝಕೂರಾ ಎಂಬಲ್ಲಿ ನಡೆದ ಶೂಟೌಟ್‌ನಲ್ಲಿ ಓರ್ವ ಪೊಲೀಸ್‌ ಅಧಿಕಾರಿ ಮೃತಪಟ್ಟು ಓರ್ವ ಉಗ್ರ ಹತಾನದ ಘಟನೆಯನ್ನು ಅನುಸರಿಸಿ ಇಂದಿನ ಎನ್‌ಕೌಂಟರ್‌ ನಡೆದಿರುವುದಾಗಿ ಸೇನೆ ಹೇಳಿದೆ. ಶೂಟೌಟ್‌ನಲ್ಲಿ ಭದ್ರತಾ ಪಡೆಗಳು ಇಬ್ಬರು ದಾಳಿಕೋರರಲ್ಲಿ ಒಬ್ಟಾತನನ್ನು ಜೀವಸಹಿತ ಸೆರೆ ಹಿಡಿದಿದ್ದರು.

No Comments

Leave A Comment