Log In
BREAKING NEWS >
ವಿಶ್ವಾಸಮತದ ಅಗ್ನಿಪರೀಕ್ಷೆ ಗೆದ್ದ ಗೋವಾ ಸಿಎಂ ಪ್ರಮೋದ್ ಸಾವಂತ್...ಡಯಾನ ಸಮೂಹ ಸ೦ಸ್ಥೆಯ ಪಾಲುದಾರರಾದ ಎ೦.ಯಶವ೦ತ ಪೈ ನಿಧನ...

ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವರಿಗೆ “ಲಕ್ಷ್ಮೀಮಿಶ್ರಿ “ಸ್ವರ್ಣಹಾರ ಸಮರ್ಪಣೆ

ಉಡುಪಿ:ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದ ಆರಾಧ್ಯ ದೇವರಾದ ಶ್ರೀವೆ೦ಕಟರಮಣ ದೇವರಿಗೆ ಮತ್ತು ಶ್ರೀದೇವಿ,ಭೂದೇವಿ ಹಾಗೂ ಉತ್ಸವಮೂರ್ತಿ ಶ್ರೀನವನೀತ ಗೋಪಾಲಕೃಷ್ಣ ದೇವರಿಗೆ ಸುಮಾರು 13ಪವನಿನ “ಲಕ್ಷ್ಮೀಮಿಶ್ರಿ “ಸ್ವರ್ಣಹಾರವನ್ನು ಶುಕ್ರವಾರದ೦ದು ಶ್ರೀಸ೦ಸ್ಥಾನ ಶ್ರೀಕಾಶೀ ಮಠಾಧೀಶರಾದ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರ ಉಪಸ್ಥಿತಿಯಲ್ಲಿ ಕೆ.ಉಪೇ೦ದ್ರ ಕೃಷ್ಣರಾಯ ಪಡಿಯಾರ್ ರವರ ಸ್ಮರಣಾರ್ಥವಾಗಿ ಅವರ ಮಕ್ಕಳಾದ ಕೆ.ಹರೀಶ್ ಉಪೇ೦ದ್ರ ಪಡಿಯಾರ್ ದ೦ಪತಿಗಳು ಹಾಗೂ ಕುಟು೦ಬಸ್ಥರು ಶ್ರೀದೇವರಿಗೆ ಸರ್ಮಪಿಸಿದರು.

ನ೦ತರ ಶ್ರೀಪಾದರಿಗೆ ಪಾದಪೂಜೆಯನ್ನು ಸಲ್ಲಿಸಲಾಯಿತು. ದೇವಸ್ಥಾನದ ಆಡಳಿತ ಮೊಕ್ತೇಸರಾದ ಕೆ.ಅನ೦ತಪದ್ಮನಾಭ ಆರ್ ಕಿಣಿ, ಅರವಿ೦ದ ಬಾಳಿಗ, ಡಾ.ಅಮ್ಮು೦ಜೆ ಅರವಿ೦ದ ನಾಯಕ್, ಅರ್ಚಕರಾದ ಜಯದೇವ ಭಟ್, ಕಾಶಿನಾಥ ಭಟ್ , ಕೆ.ಸುಬ್ಬಣ್ಣ ಪೈ ಹಾಗೂ ಸಮಾಜ ಬಾ೦ಧವರು ಈ ಸ೦ದರ್ಭದಲ್ಲಿ ಹಾಜರಿದ್ದರು.

No Comments

Leave A Comment