Log In
BREAKING NEWS >
ವೇತನ ಹೆಚ್ಚಳ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 30 ಮತ್ತು 31ರಂದು ಬ್ಯಾಂಕ್‌ ನೌಕರರು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ....

3 ನೇ ಮದ್ವೆ!;ಬಿಗರೂಟದ ವೇಳೆ ವರನಿಗೆ ಗೂಸಾ

ಹಾಸನ : ಇಲ್ಲಿನ ಗೊರುರಿನಲ್ಲಿ ಇಬ್ಬರು ಮಹಿಳೆಯರಿಗೆ ವಂಚಿಸಿ ಮೂರನೇಯ ವಿವಾಹದ ಸಂಭ್ರಮದಲ್ಲಿದ್ದ ಭೂಪನೊಬ್ಬನಿಗೆ ಮೊದಲ ಹೆಂಡತಿ ಮತ್ತುಸಂಬಂಧಿಕರು ಹಿಗ್ಗಾಮುಗ್ಗಾ ಗೂಸಾ ನೀಡಿ ಮದುವೆ ಹುಚ್ಚು ಬಿಡಿಸಿದ ಘಟನೆ ನಡೆದಿದೆ.

ರಾಜೇಶ್‌ ಎಂಬಾತ ಥಳಿತಕ್ಕೊಳಗಾಗಿದ್ದು, ಈಗಾಗಲೇ 2 ಮದುವೆಯಾಗಿದ್ದು, ಮೊದಲ ಹೆಂಡತಿಗೆ ಇಬ್ಬರು ಮಕ್ಕಳಿದ್ದಾರೆ, 2 ನೇ ಹೆಂಡತಿಗೂ ಹಿಂಸೆ ನೀಡಿ  ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿ ಮೂರನೇ ಮದುವೆಯ ಬೀಗರೂಟದ ಸಂಭ್ರಮದಲ್ಲಿದ್ದ.

2005 ರಲ್ಲಿ ಚನ್ನರಾಯಪಟ್ಟಣದ ಸೌಮ್ಯ ಅವರನ್ನು ವಿವಾಹವಾಗಿ  6 ವರ್ಷಗಳ ಕಾಲ ಸಂಸಾರ ನಡೆಸಿ ಇಬ್ಬರು ಮಕ್ಕಳನ್ನು ಕರುಣಿಸಿದ್ದ.  ಆ ಬಳಿಕ ಕಲಾ ಎಂಬಾಕೆಯನ್ನು ವಿವಾಹವಾಗಿ 10 ತಿಂಗಳು ಸಂಸಾರ ನಡೆಸಿದ್ದ. ಇದೀಗ 3 ನೇ ಮದುವೆಯಾಗಿ ಸಂಬಂಧಿಕರಿಗೆ ಬೀಗರೂಟ ಹಾಕುತ್ತಿದ್ದ. ಈ ವೇಳೆ ಮನೆಯ ಮಹಡಿಯ ಮೇಲೆ ರಣರಂಗ ನಿರ್ಮಾಣವಾಗಿದೆ.

ಸ್ಥಳಕ್ಕಾಗಮಿಸಿದ ಗೋರೂರು ಪೊಲೀಸರು ರಾಜೇಶ್‌ನನ್ನು ವಶಕ್ಕೆ ಪಡೆದಿದ್ದಾರೆ.

No Comments

Leave A Comment