Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ಮುಂಬಯಿಯಲ್ಲೂ ಲವ್‌ ಜಿಹಾದ್‌ ; ಮತಾಂತರವಾಗಲು ಚಿತ್ರಹಿಂಸೆ

ಮುಂಬಯಿ: ಲವ್‌ ಜಿಹಾದ್‌ ಎನ್ನಲಾದ ಇನ್ನೊಂದು ಪ್ರಕರಣ ಮುಂಬಯಿಯಲ್ಲಿ ವರದಿಯಾಗಿದ್ದು ಮಾಜಿ ಮಾಡೆಲ್‌ ಒಬ್ಬಳಿಗೆ ಮತಾಂತರವಾಗುವಂತೆ ಪತಿ ಚಿತ್ರಹಿಂಸೆ ನೀಡಿರುವ ಕುರಿತು ಬಾಂದ್ರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

42 ವರ್ಷ ಪ್ರಾಯದ ಮಾಜಿ ಮಾಡೆಲ್‌  ರಶ್ಮಿ ಶಹಬಾಜ್‌ಕರ್‌  ತನಗಾದ ಅನ್ಯಾಯದ ಕುರಿತು ದೂರು ಸಲ್ಲಿಸಿದ್ದು,’ನಾನು ಹುಟ್ಟಿನಿಂದ ಹಿಂದೂ ಧರ್ಮೀಯಳಾಗಿದ್ದು ಈಗ ನನ್ನ ಪತಿ ಆಸೀಫ್  ಮತಾಂತರವಾಗುವಂತೆ ಜೀವ ಬೆದರಿಕೆ ಹಾಕಿ, ಚಿತ್ರಹಿಂಸೆ ನೀಡುತ್ತಿದ್ದಾರೆ’ ಎಂದು ನೋವು ತೋಡಿಕೊಂಡಿದ್ದಾರೆ.

‘ನನ್ನ ಪತಿ ಇತ್ತೀಚೆಗೆ ಇನೋರ್ವ ಹಿಂದೂ ಯುವತಿಯನ್ನು ವಿವಾಹವಾಗಿದ್ದು, ಆಕೆ ಆಸೀಫ್ಗಿಂತ ವಯಸ್ಸಿನಲ್ಲಿ ಅರ್ಧದಷ್ಟುಸಣ್ಣವಳು’ ಎಂದು ಪೊಲೀಸರ ಬಳಿ ಹೇಳಿಕೊಂಡಿದ್ದಾರೆ.

ರಶ್ಮಿ ಶುಕ್ರವಾರ ಮಾಧ್ಯಮಗಳನ್ನು ಪತಿಯ ಮನೆಗೆ ಕರೆಸಿಕೊಂಡು ತನಗಾದ ಅನ್ಯಾಯವನ್ನು ಬಹಿರಂಗಪಡಿಸಿದ್ದಾರೆ.

ಅಂದಹಾಗೆ 2005 ರಲ್ಲಿ ಆಸೀಫ್ ಮತ್ತು ರಶ್ಮಿ ಪ್ರೇಮ ವಿವಾಹವಾಗಿದ್ದು, ಕಳೆದ ಕೆಲ ವರ್ಷಗಳಿಂದ ಮತಾಂತರವಾಗುವಂತೆ ಪೀಡಿಸಲು ಆರಂಭಿಸಿದ್ದಾನೆ ಎಂದು ಹೇಳಲಾಗಿದೆ.

ಕೆಲ ದಿನಗಳ ಹಿಂದೆ ಕೇರಳದಲ್ಲಿ ಲವ್‌ ಜಿಹಾದ್‌ ಪ್ರಕರಣ ಸದ್ದು ಮಾಡಿತ್ತು. 25 ವರ್ಷ ಪ್ರಾಯದ ಹಿಂದೂ ಯುವತಿ ಹೈಕೋರ್ಟ್‌ ಮೆಟ್ಟಿಲೇರಿ ನನ್ನನ್ನು ಬಲವಂತವಾಗಿ ಮತಾಂತರ ಮಾಡಿ  ಸೌದಿ ಅರೇಬಿಯಾದಲ್ಲಿ ಸೆಕ್ಸ್‌ ಜಾಲಕ್ಕೆ ಸೇರಿಸಲಾಗಿತ್ತು ಎಂದು ನೋವು ತೋಡಿಕೊಂಡಿದ್ದಳು.

No Comments

Leave A Comment