Log In
BREAKING NEWS >
ನಾಡಿನ ಸಮಸ್ತ ಜನತೆಗೆ, ನಮೆಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನಾಗರ ಪ೦ಚಮಿ ಹಾಗೂ ನೇ ಸ್ವಾತ೦ತ್ರೋತ್ಸವದ ಶುಭಾಶಯಗಳು....

ಪುತ್ತೂರು:ಬಸ್‌-ಆಮ್ನಿ ಢಿಕ್ಕಿ;ಓರ್ವ ಸಾವು,ನಾಲ್ವರು ಗಂಭೀರ

ಪುತ್ತೂರು: ಇಲ್ಲಿನ ಇಚ್ಲಂಪಾಡಿ ಬಳಿ ಖಾಸಗಿ ಬಸ್‌ ಮತ್ತು ಆಮ್ನಿ ನಡುವೆ ಶನಿವಾರ ಭೀಕರ ಅಪಘಾತ ಸಂಭವಿಸಿದ್ದು, ದುರ್ಘ‌ಟನೆಯಲ್ಲಿ ಆಮ್ನಿಯಲ್ಲಿದ್ದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಇತರ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬೆಂಗಳೂರಿನಿಂದ ಯಾತ್ರಿಗಳನ್ನು ಸುಬ್ರಹ್ಮಣ್ಯಕ್ಕೆ ಕರೆದೊಯ್ಯುತ್ತಿದ್ದ ಬಸ್‌ ಗೆ ಆಮ್ನಿ ಢಿಕ್ಕಿಯಾಗಿದೆ. ಆಮ್ನಿಯಲ್ಲಿದ್ದ ಕಾರ್ಕಳ ಮೂಲದ ಸಂದೇಶ್‌ ಎನ್ನುವವರು ಸಾವನ್ನಪ್ಪಿದ್ದು ,ನಾಲ್ವರು ಗಾಯಾಳುಗಳನ್ನುಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಸ್‌ ಅಪಘಾತದ ತೀವ್ರತೆಗೆ ಬಸ್‌ ರಸ್ತೆ ಪಕ್ಕದ ಕಮರಿಗೆ ಜಾರಿತ್ತು, ಬಸ್‌ನಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

No Comments

Leave A Comment