Log In
BREAKING NEWS >
ಉಡುಪಿ:ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಮಹೋತ್ಸವದ ಶುಭಾರoಭಕ್ಕೆ ಕ್ಷಣಗಣನೆ....ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ;೧೧೮ನೇ ಭಜನಾ ಸಪ್ತಾಹ ಮಹೋತ್ಸವದ 1`ದಿನ ಶ್ರೀದೇವರಿಗೆ ಮತ್ಸ್ಯಲoಕಾರ

ಭಾರತ-ಪಾಕ್‌ ಗಡಿಯಲ್ಲಿ ಹೊಂಚು ದಾಳಿ; 22 ಕಿಲೊ ಹೆರಾಯಿನ್‌ ವಶ

ಅಮೃತ್‌ಸರ : ಪಂಜಾಬ್‌ ನ ಭಾರತ – ಪಾಕ್‌ ಗಡಿಯಲ್ಲಿ ಗಡಿಯಾಚೆಗಿಂದ ಮಾದಕ ದ್ರವ್ಯವನ್ನು ಕಳ್ಳಸಾಗಾಟ ಮಾಡುವ ತಂಡದವರ ವಿರುದ್ಧ ಬಿಎಸ್‌ಎಫ್ ಹೊಂಚು ದಾಳಿ ನಡೆಸಿ 22 ಕಿಲೋ ಹೆರಾಯಿನ್‌ ವಶಪಡಿಸಿಕೊಂಡಿರುವುದಾಗಿ ವರದಿಯಾಗಿದೆ.

ಫಿರೋಜ್‌ಪುರ ವಲಯದ ಸತ್‌ಪಾಲ್‌ ಹೊರಠಾಣೆ ಸಮೀಪ ಗಡಿ ತಂತಿ ಬೇಲಿ ದಾಟಿ ಬಂದ ಮಾದಕ ದ್ರವ್ಯ ಕಳ್ಳಸಾಗಾಟಗಾರರ ವಿರುದ್ಧ ಹೊಂಚು ದಾಳಿ ನಡೆಸಿದ ಬಿಎಸ್‌ಎಫ್ ಯೋಧರಿಗೆ ತಲಾ 1 ಕಿಲೋ ಪ್ಯಾಕೇಟ್‌ನ 22 ಪ್ಯಾಕೆಟ್‌ ಹೆರಾಯಿನ್‌, ಒಂದು ಟರ್ಕಿ ನಿರ್ಮಿತ ಪಿಸ್ತೂಲು, 11 ಬುಲೆಟ್‌ಗಳು ಮತ್ತು ಒಂದು 12 ಅಡಿ ಉದ್ದ ಪ್ಲಾಸ್ಟಿಕ್‌ ಪೈಪ್‌ ಸಿಕ್ಕಿತು.

ಬಿಎಸ್‌ಎಫ್ ಮತ್ತು ಪಂಜಾಬ್‌ ಪೊಲೀಸ್‌ ನ ಜಂಟಿ ಗುಪ್ತಚರ ಮಾಹಿತಿಯನ್ನು ಅನುಸರಿಸಿ ಈ ಹೊಂಚು ದಾಳಿಯನ್ನು  ಇಂದು ನಸುಕಿನ 4 ಗಂಟೆಯ ಹೊತ್ತಿಗೆ ನಡೆಸಲಾಗಿತ್ತು. ದುಷ್ಕರ್ಮಿಗಳು ಬಿಎಸ್‌ಎಫ್ ಯೋಧರೊಂದಿಗೆ ಗುಂಡಿನ ಕಾಳಗ ನಡೆಸಿ ಬಳಿಕ ಪಾಕ್‌ನತ್ತ ಪರಾರಿಯಾದರು.

 

No Comments

Leave A Comment