Log In
BREAKING NEWS >
ನವೆ೦ಬರ್ 24ರಿ೦ದ ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 89ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ-ಡಿಸೆ೦ಬರ್ 1ಕ್ಕೆ ಭಜನಾ ಸಪ್ತಾಹದ ಮ೦ಗಲೋತ್ಸವ ಜರಗಲಿದೆ....

ಕೇರಳದಲ್ಲಿ ಇನ್ನೋರ್ವ RSS ಕಾರ್ಯಕರ್ತನ ಕಗ್ಗೊಲೆ

ತಿರುವನಂತಪುರಂ : ಬಿಜೆಪಿ ಕೇರಳದಲ್ಲಿ ಜನರಕ್ಷಾ ಯಾತ್ರೆ ನಡೆಸಿದ ಬೆನ್ನಲ್ಲೇ ಭಾನುವಾರ ಹಾಡಹಗಲೇ  ಆರ್‌ಎಸ್‌ಎಸ್‌ ಕಾರ್ಯಕರ್ತನೊಬ್ಬನ ಬರ್ಬರ ಹತ್ಯೆ ನಡೆದಿದೆ.

ತ್ರಿಶೂರ್‌ ಜಿಲ್ಲೆಯ ನೆನಮನಿಕ್ಕಾರ್‌ನಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತ ಆನಂದ್‌ ಎನ್ನುವವರು ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ  ದುಷ್ಕರ್ಮಿಗಳು  ಅಡ್ಡಗಟ್ಟಿ ಕೊಚ್ಚಿ ಕೊಲೆಗೈದಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಆನಂದ್‌ ಕೊನೆಯುಸಿರೆಳೆದಿದ್ದಾರೆ.

ಸಿಪಿಎಂ ಕಾರ್ಯಕರ್ತನ ಕೊಲೆ ಕೇಸ್‌ನ ಆರೋಪಿ ಯಾಗಿ ಜಾಮೀನಿನ ಮೇಲೆ ಬಿಡುಗಡೆ ಯಾಗಿದ್ದ ಆನಂದ್‌ ಅವರನ್ನು ಪ್ರತೀಕಾರಕ್ಕಾಗಿ ಕೊಲೆಗೈಯಲಾಗಿದೆ ಎನ್ನಲಾಗಿದೆ. ಹತ್ಯೆಯನ್ನು ಸಿಪಿಎಂ ಕಾರ್ಯಕರ್ತರು ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

No Comments

Leave A Comment