Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ತಾಂತ್ರಿಕ ತೊಡಕಿನಿಂದಾಗಿ ಬಿಜೆಪಿ ಸೇರ್ಪಡೆ ಸಾಧ್ಯವಾಗಿಲ್ಲ

ಕುಂದಾಪುರ : ತಾಂತ್ರಿಕ ತೊಡಕಿನಿಂದಾಗಿ  ಬಿಜೆಪಿ ಸೇರ್ಪಡೆ ಸಾಧ್ಯವಾಗಿಲ್ಲ.ಆದರೆ ಶೀಘ್ರವಾಗಿ ಬಿಜೆಪಿಗೆ ಸೇರ್ಪಡೆಗೊಳ್ಳುವುದಾಗಿ  ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ್‌ ಶೆಟ್ಟಿ ಅವರು ಹೇಳಿದ್ದಾರೆ.

ಶನಿವಾರ ಕುಂದಾಪುರದ ಪ್ರಸ್‌ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ಸೇರ್ಪಡೆ ಹಾಗೂ ತನ್ನ ಮೇಲಿನ ಕೆಲ ಆರೋಪಗಳ ಕುರಿತು ಸ್ಪಷ್ಟನೆ ನೀಡಿದರು. ಇದೆ ವೇಳೆ  ಬಿಜೆಪಿಯ ಪರಿವರ್ತನಾ ರ್ಯಾಲಿಯಲ್ಲಿ ಸಾಮಾನ್ಯ ವ್ಯಕ್ತಿಯಾಗಿ ಪಾಲ್ಗೊಳ್ಳುವುದಾಗಿ ತಿಳಿಸಿದರು.

ಇತ್ತೀಚಿಗಿನ ಬೆಳವಣಿಗೆಯಲ್ಲಿ ಹಾಲಾಡಿ ಶ್ರೀನಿವಾಸ್‌ ಶೆಟ್ಟಿ ಅವರು ಕ್ಷೇತ್ರಕ್ಕಾಗಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡಿ ಕ್ಷೇತ್ರದಲ್ಲಿ ತಾನು ಮಾಡಿದ ಅಭಿವೃದ್ಧಿ ಕಾರ್ಯಗಳ ವಿವರ ನೀಡಿದರು.

ತಾವು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆ ಗೊಳ್ಳುವುದು ಯಾವಾಗ ಎಂಬ ಪ್ರಶ್ನೆಗೆ ಸೂಕ್ತ ಕಾಲದಲ್ಲಿ ಸೇರ್ಪಡೆ ಗೊಳ್ಳುವುದಾಗಿ ತಿಳಿಸಿದರು.

‘ಬಿಜೆಪಿ ಸೇರ್ಪಡೆಗೆ ಕಾನೂನಿನ ತೊಡಕು ಇರುವುದರಿಂದ ತಾನು ಅಧಿಕೃತವಾಗಿ ಬಿಜೆಪಿಯ ಯಾವುದೇ ವೇದಿಕೆಗಳಲ್ಲಿ ಕಾಣಿಸಿಕೊಂಡಿಲ್ಲ’ ಎಂದರು.

 ಪರಿವರ್ತನಾ ರ್ಯಾಲಿಯ  ಫ್ಲೆಕ್ಸ್‌ಗಳಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಭಾವಚಿತ್ರವಿದೆಯಲ್ಲಾ, ಇದು ಅಧಿಕೃತ ಸೇರ್ಪಡೆಯೋ, ಅನಧಿಕೃತ ಸೇರ್ಪಡೆಯೋ ಎಂಬ ಪ್ರಶ್ನೆಗೆ ‘ನಾನು ಯಾರಿಗೂ ಫ್ಲೆಕ್ಸ್‌ಗಳನ್ನು ಹಾಕುವಂತೆ ಹೇಳಿಲ್ಲ. ನನ್ನ ಅಭಿಮಾನಿಗಳು ಹಾಕಿರಬಹುದು’ ಎಂದರು.

No Comments

Leave A Comment