Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಮುಸ್ಲಿಂ ಯೋಗ ಶಿಕ್ಷಕಿಯ ನಿವಾಸದ ಮೇಲೆ ಕಲ್ಲು ತೂರಾಟ

ರಾಂಚಿ : ಫ‌ತ್ವಾ ಹೊರಡಿಸಲಾಗಿದ್ದ ಯೋಗ ಶಿಕ್ಷಕಿ ರಾಫಿಯಾ ನಾಝ್ ಅವರ  ನಿವಾಸದ ಮೇಲೆ ಶುಕ್ರವಾರ ರಾತ್ರಿ  ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ ಅಟ್ಟಹಾಸ ಮೆರೆದಿದ್ದಾರೆ. ಖಾಸಗಿ  ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡುವ ವೇಳೆಯಲ್ಲೇ ಮನೆಯ ಸುತ್ತುವರಿದಿದ್ದ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ.

ರಾಫಿಯಾ ನಾಝ್ ಅವರಿಗೆ ಪೊಲೀಸ್‌ ಭದ್ರತೆ ಒದಗಿಸಿದ ಹೊರತಾಗಿಯೂ ದಾಳಿ ನಡೆದಿದೆ. ‘ಇದೀಗ ತೀವ್ರ ಭೀತಿಯಲ್ಲಿ ದಿನ ಕಳೆಯುವ ಸ್ಥಿತಿ ನಿರ್ಮಾಣವಾಗಿದ್ದು, ರಸ್ತೆಗೆ ಬರಲೂ ನಾನು ಭಯಪಡುವಂತಾಗಿದೆ’ ಎಂದು ರಾಫಿಯಾ ಕಣ್ಣೀರಿಟ್ಟಿದ್ದಾರೆ.

ಬಾಬಾ ರಾಮ್‌ ದೇವ್‌ ಅವರು ರಾಫಿಯಾ ಬೆಂಬಲಕ್ಕೆ ನಿಂತಿದ್ದು, ‘ಸೌದಿ ಅರೇಬಿಯಾ ದಿಂದ ಹಿಡಿದು ಇರಾನ್‌ , ಇರಾಕ್‌ ನಲ್ಲೂ ಅನೇಕ ಮುಸ್ಲಿಮರು ಯೋಗ ಮಾಡುತ್ತಾರೆ. ಇದು ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಒಳ್ಳೆಯದು.ಇದರಲ್ಲಿ ಧರ್ಮ ಬೆರಸಬೇಡಿ’ಎಂದಿದ್ದಾರೆ.

ಮೌಲಾನಾ ಸೈಫ್ ಅಬ್ಬಾಸ್‌ ಅವರೂ ರಾಪಿಯಾ ಬೆಂಬಲಕ್ಕೆ ನಿಂತಿದ್ದು’ಮಹಿಳೆ ಯೋಗ ತರಬೇತಿ ನೀಡಿದರೆ ತಪ್ಪಲ್ಲ’ ಎಂದಿದ್ದಾರೆ.

No Comments

Leave A Comment