Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಟೆಸ್ಟ್‌, ಏಕದಿನ ಹಾಗೂ ಟಿ–20 ಸರಣಿ ಭಾರತಕ್ಕೆ ಬಂದಿಳಿದ ಶ್ರೀಲಂಕಾ ತಂಡ

ಕೋಲ್ಕತ್ತ: ಭಾರತದ ವಿರುದ್ಧ  3 ಪಂದ್ಯಗಳ ಟೆಸ್ಟ್‌ ಸರಣಿ, ಮೂರು ಏಕದಿನ ಪಂದ್ಯಗಳು ಸೇರಿದಂತೆ 3 ಟಿ–20 ಪಂದ್ಯಗಳನ್ನು ಆಡಲು ದಿನೇಶ್‌ ಚಾಂಡಿಮಲ್‌ ನಾಯಕತ್ವದ ಶ್ರೀಲಂಕಾ ತಂಡ ಬುಧವಾರ ಭಾರತಕ್ಕೆ ಆಗಮಿಸಿದೆ.

ನ. 16ರಿಂದ ಭಾರತ – ಶ್ರೀಲಂಕಾ ತಂಡಗಳ ನಡುವೆ ಟೆಸ್ಟ್‌ ಸರಣಿ ಆರಂಭವಾಗಲಿದೆ.

ಮೂರು ಟೆಸ್ಟ್‌ ಪಂದ್ಯಗಳ ವೇಳಾಪಟ್ಟಿ
* ನ. 16ರಂದು ಕೋಲ್ಕತ್ತದ ಈಡನ್‌ ಗಾರ್ಡನ್‌ ಕ್ರೀಡಾಂಗಣದಲ್ಲಿ ಮೊದಲ ಟೆಸ್ಟ್ ಪಂದ್ಯ
* ನ.24 ರಂದು ನಾಗ್ಪುರದ ವಿದರ್ಭ ಕ್ರೀಡಾಂಗಣದಲ್ಲಿ ಎರಡನೇ ಟೆಸ್ಟ್ ಪಂದ್ಯ
* ಡಿ. 2 ರಂದು ದೆಹಲಿಯ ಪಿರೋಜ್‌ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಮೂರನೇ ಟೆಸ್ಟ್ ಪಂದ್ಯ

ಮೂರು ಏಕದಿನ ಕ್ರಿಕೆಟ್‌ ಪಂದ್ಯಗಳ ವೇಳಾಪಟ್ಟಿ
* ಡಿ. 10ರಂದು ಧರ್ಮಶಾಲಾದ ಹಿಮಾಚಲ ಕ್ರಿಕೆಟ್‌ ಸಂಸ್ಥೆಯ ಕ್ರೀಡಾಂಗಣದಲ್ಲಿ ಮೊದಲ ಏಕದಿನ ಪಂದ್ಯ
* ಡಿ. 13ರಂದು ಮೊಹಾಲಿಯ ಪಂಜಾಬ್‌  ಕ್ರಿಕೆಟ್‌ ಸಂಸ್ಥೆಯ ಕ್ರೀಡಾಂಗಣದಲ್ಲಿ ಎರಡನೇ ಏಕದಿನ ಪಂದ್ಯ
* ಡಿ. 17ರಂದು ವಿಶಾಖಪಟ್ಟಣದ ಡಾ. ವೈ. ಎಸ್‌. ರಾಜಶೇಖರ್‌ ರೆಡ್ಡಿ ಕ್ರೀಡಾಂಗಣದಲ್ಲಿ ಮೂರನೇ ಏಕದಿನ ಪಂದ್ಯ

ಮೂರು ಟಿ–20 ಪಂದ್ಯಗಳ ವೇಳಾಪಟ್ಟಿ
* ಡಿ. 20ರಂದು ಕಟಕ್‌ನ ಬರಾಬತಿ ಕ್ರೀಡಾಂಗಣದಲ್ಲಿ ಮೊದಲ ಟಿ–20 ಪಂದ್ಯ
* ಡಿ. 22ರಂದು ಇಂದೋರ್‌ನ ಹೋಲ್ಕರ್‌ ಕ್ರೀಡಾಂಗಣದಲ್ಲಿ ಎರಡನೇ ಟಿ–20 ಪಂದ್ಯ
* ಡಿ. 24ರಂದು ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಮೂರನೇ ಟಿ–20 ಪಂದ್ಯ

No Comments

Leave A Comment