Log In
BREAKING NEWS >
ಉಡುಪಿ:ಪಲಿಮಾರು ಮಠಾಧೀಶರ ಪರ್ಯಾಯ ಪೀಠಾರೋಹಣಕ್ಕೆ ಕ್ಷಣಗಣನೆ...ರಥಬೀದಿಯಲ್ಲಿ ಭಜನಾ ತ೦ಡಗಳಿ೦ದ ಮುಗಿಲುಮುಟ್ಟಿದ ಭಜನೆ...ಬೃಹತ್ ಜನಸ್ತೋಮ

ಅಧ್ಯಕ್ಷನಿಗೆ ಪದವಿ ತೊರೆಯಲು ಹೇಳಿದ ಮಿಸ್‌ ಬ್ರೆಸಿಲ್‌

ಸೌಂದರ್ಯ ಸ್ಪರ್ಧೆಗಳಲ್ಲಿ ಗೆಲ್ಲುವ ಸ್ಪರ್ಧಿಗಳಿಗೆ ಅವರ ಜೀವನದ ಮಹತ್ತರ ಗುರಿಗಳ ಬಗ್ಗೆ ಪ್ರಶ್ನಿಸಿದರೆ ಸಾಮಾನ್ಯವಾಗಿ ಏನು ಉತ್ತರಿಸುತ್ತಾರೆ? ನಾನು ಬಡವರ ಸೇವೆ ಮಾಡುತ್ತೇನೆ, ಪರಿಸರ ರಕ್ಷಿಸುತ್ತೇನೆ ಎನ್ನುತ್ತಾರಲ್ವಾ?

ಆದರೆ ಮಿಸ್‌ ಬಮ್‌ಬಮ್‌ ಬ್ರೆಜಿಲ್‌ ಗೆದ್ದ ಬೆಡಗಿ ರೋಸಿ ಒಲಿವೇರಿಯಾ ಬ್ರೆಜಿಲ್‌ ರಾಜಕೀಯ ದಿಕ್ಕು ಬದಲಿಸುವಂಥ ಪೋಸ್ಟರ್‌ ಹಿಡಿದೇ ರ್‍ಯಾಂಪ್‌ ಮೇಲೆ ಹತ್ತಿದರು. ಬ್ರೆಜಿಲ್‌ನ ಭ್ರಷ್ಟ ಅಧ್ಯಕ್ಷ ಟೇಮರ್‌ನ ಉದ್ದೇಶಿಸಿ, ಫೊರಾ ಟೇಮರ್‌(ಟೇಮರ್‌ ತೊಲಗು) ಎಂಬ ಫ‌ಲಕ ತೋರಿದಳು. ಪ್ರಶ್ನೋತ್ತರ ವೇಳೆಯೂ, ಟೇಮರ್‌ನನ್ನು ತೊಲಗಿಸಿ, ಸದೃಢ ಬ್ರೆಜಿಲ್‌ ಕಟ್ಟುವುದೇ ನನ್ನ ಗುರಿ ಎಂದು ಧೈರ್ಯವಾಗಿ ನುಡಿದಳು.

No Comments

Leave A Comment