Log In
BREAKING NEWS >
ಉಡುಪಿ:ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಮಹೋತ್ಸವದ ಶುಭಾರoಭಕ್ಕೆ ಕ್ಷಣಗಣನೆ....ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ;೧೧೮ನೇ ಭಜನಾ ಸಪ್ತಾಹ ಮಹೋತ್ಸವದ 1`ದಿನ ಶ್ರೀದೇವರಿಗೆ ಮತ್ಸ್ಯಲoಕಾರ

ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ ಶಿಪ್: ಮೇರಿ ಕೋಮ್ ಗೆ ಚಿನ್ನದ ಗರಿ

ಹೋ ಚಿ ಮೆನ್ ಸಿಟಿ: ಭಾರತದ ಹೆಮ್ಮೆಯ ಬಾಕ್ಸಿಂಗ್ ತಾರೆ ಮೇರಿ ಕೋಮ್ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನ 48 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಉತ್ತರ ಕೊರಿಯಾದ ಕಿಮ್ ಹೈಯಾಂಗ್ ಮಿ ವಿರುದ್ಧ ಮೇರಿ ಕೋಮ್ 5-0 ಅಂತರದ ಜಯ ದಾಖಲಿಸಿದರು.

2014 ರ ಏಷ್ಯನ್ ಕ್ರೀಡಾಕೂಟದ ಬಳಿಕದಲ್ಲಿ ಇದು ಮೇರಿ ಕೋಮ್ ಅವರ ಮೊದಲ ಅಂತರರಾಷ್ಟ್ರೀಯ ಚಿನ್ನದ ಪದಕ ಆಗಿದೆ. ಹಾಗೆಯೇ ಈ ವರ್ಷದ ಅವಧಿಯಲ್ಲಿ ಅವರ ಮೊದಲ ಪದಕ ಇದಾಗಿದೆ.

ನಿನ್ನೆ ನಡೆದ ಪಂದ್ಯದಲ್ಲಿ ಮೇರಿ, ಜಪಾನ್ ನ ಸುಬಾಸಾ ಕೊಮುರಾ ಅವರನ್ನು ಮಣಿಸಿ ಫೈನಲ್ ತಲುಪಿದ್ದರು.

No Comments

Leave A Comment