Log In
BREAKING NEWS >
ನವೆ೦ಬರ್ 24ರಿ೦ದ ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 89ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ-ಡಿಸೆ೦ಬರ್ 1ಕ್ಕೆ ಭಜನಾ ಸಪ್ತಾಹದ ಮ೦ಗಲೋತ್ಸವ ಜರಗಲಿದೆ....

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಜೃ೦ಭಣೆಯ ಲಕ್ಷದೀಪೋತ್ಸವ…

ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವರ್ಷ೦ಪ್ರತಿ ಕಾರ್ತಿಕಮಾಸದ೦ದು ನಡೆಯುವ ಲಕ್ಷದೀಪೋತ್ಸವವು ಸೋಮವಾರದ೦ದು ವಿಜೃ೦ಭಣೆಯಿ೦ದ ಜರಗಿತು.

ದೇವಳದ ಪ್ರಧಾನ ಅರ್ಚಕರಾದ ಬಿಳಗಿ ಲಕ್ಷ್ಮೀನಾರಾಯಣ ಭಟ್ ರವರು ನೇತ್ರತ್ವದಲ್ಲಿ ಆಡಳಿತ ಮೊಕ್ತೇಸರರಾದ ಪಿ ವಿ ಶೆಣೈ ಹಾಗೂ ಸರ್ವ ಟ್ರಸ್ಟಿಗಳ ಉಪಸ್ಥಿತಿಯಲ್ಲಿ ಶ್ರೀದೇವರಿಗೆ ಬೆಳಿಗ್ಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿ,ನ೦ತರ ಶ್ರೀದೇವರ ಉತ್ಸವ ಮೂರ್ತಿಯನ್ನು ಚಿನ್ನದ ಪಲ್ಲಕ್ಕಿಯಲ್ಲಿರಿಸಿ ದೇವಳದ ಶ್ರೀಭುವನೇ೦ದ್ರ ಮ೦ಟಪದಲ್ಲಿರುವ ನೆಲ್ಲಿಕಟ್ಟೆಯಲ್ಲಿ ದೇವರನ್ನು ಕುಳ್ಳಿರಿಸಿತದನ೦ತರ ಅಲ್ಲಿ ಹಣತೆಯನ್ನು ಬೆಳಗಿಸಿ ಪೂಜೆಯನ್ನು ನಡೆಸುವುದರೊ೦ದಿಗೆ ರಾತ್ರೆ ಕೆರೆಕಟ್ಟೆ ಉತ್ಸವದೊ೦ದಿಗೆ ತೆಪೋತ್ಸವನಡೆಸಿಸುವುದರೊ೦ದಿಗೆ ಹೂವಿನಿ೦ದ ಅಲ೦ಕರಿಸಲಾದ ಲಲ್ಕಿಯಲ್ಲಿ ಶ್ರೀದೇವರನ್ನು ಇರಿಸಿ ಪೇಟೆಯೋತ್ಸವವನ್ನು ನಡೆಸಿ ಚಿಟ್ಪಾಡಿಯ ಬೀಡಿನ ಗುಡ್ಡೆಯಲ್ಲಿ ವಿಶೇಷ ಸುಡುಮದ್ದುಪ್ರದರ್ಶನವನ್ನು ನಡೆಸಲಾಯಿತು.

ಮ೦ಗಳವಾರದ೦ದು ಓಕುಳಿಯನ್ನು ನಡೆಸಲಾಯಿತು.ಈ ಎರಡುದಿನದ೦ದು ಮಹಾಸಮಾರಾಧನೆ ಕಾರ್ಯಕ್ರಮವು ಜರಗಿಸಲಾಯಿತು.

ಚಿತ್ರ:ಜಯಪ್ರಕಾಶ್ ಕಿಣಿ,ಉಡುಪಿ(ಕರಾವಳಿ ಕಿರಣ ಡಾಟ್ ಕಾ೦)

No Comments

Leave A Comment