Log In
BREAKING NEWS >
ಉಡುಪಿ:ಪಲಿಮಾರು ಮಠಾಧೀಶರ ಪರ್ಯಾಯ ಪೀಠಾರೋಹಣಕ್ಕೆ ಕ್ಷಣಗಣನೆ...ರಥಬೀದಿಯಲ್ಲಿ ಭಜನಾ ತ೦ಡಗಳಿ೦ದ ಮುಗಿಲುಮುಟ್ಟಿದ ಭಜನೆ...ಬೃಹತ್ ಜನಸ್ತೋಮ

ಅರ್ಧ ದಾರಿಯಲ್ಲಿ ಪ್ರಯಾಣಿಕರನ್ನು ಇಳಿಸಿದ ನಂತರ ವಿಮಾನ ಮುಂದೆ ಹೋಗಲ್ಲ, ಬಸ್ ಮೂಲಕ ಗಮ್ಯ ತಲುಪಿ ಎಂದರು!

ಲಾಹೋರ್: ಅಬುದಾಬಿಯಿಂದ ರಹೀಮ್ ಯಾರ್ ಖಾನ್ ನಗರಕ್ಕೆ ಪ್ರಯಾಣಿಸುತ್ತಿದ್ದ ಪಾಕಿಸ್ತಾನದ ಅಂತರ ರಾಷ್ಟ್ರೀಯ ವಿಮಾನವೊಂದು ಹವಾಮಾನ ವೈಪರೀತ್ಯದಿಂದಾಗಿ ಲಾಹೋರ್‍‍ನಲ್ಲಿ ಪ್ರಯಾಣಿಕರನ್ನು ಇಳಿಸಿದೆ.

ಅರ್ಧ ದಾರಿಯಲ್ಲಿ ಪ್ರಯಾಣಿಕರನ್ನು ಇಳಿಸಿದ ನಂತರ ಪ್ರಯಾಣಿಕರು ಗಮ್ಯ ತಲುಪಬೇಕಾದರೆ ಬಸ್ ಹತ್ತಿ ಎಂದು ವಿಮಾನದ ಸಿಬ್ಬಂದಿ ಹೇಳಿರುವುದಾಗಿ ಜಿಯೊ ನ್ಯೂಸ್ ವರದಿ ಮಾಡಿದೆ. ಆದರೆ ತಾವು ಯಾವುದೇ ಕಾರಣಕ್ಕೂ ವಿಮಾನದಿಂದ ಇಳಿಯಲ್ಲ ಎಂದು ಪ್ರಯಾಣಿಕರು ಪಟ್ಟು ಹಿಡಿದ್ದಿದ್ದಾರೆ.

ಪ್ರಯಾಣಿಕರು ವಾಗ್ವಾದ ನಡೆಸಿದ್ದಕ್ಕೆ ವಿಮಾನ ಸಿಬ್ಬಂದಿ ವಿಮಾನದ ಏರ್ ಕಂಡಿಷನಿಂಗ್ ಸಿಸ್ಟಂನ್ನು ಆಫ್ ಮಾಡಿದ್ದಾರೆ, ಇದರಿಂದಾಗಿ ಪ್ರಯಾಣಿಕರಿಗೆ ಉಸಿರುಕಟ್ಟಿದ ಅನುಭವವಾಯಿತು.

ಲಾಹೋರ್‍‍ನಿಂದ ರಹೀಂ ಯಾರ್ ಖಾನ್ ನಗರಕ್ಕೆ ಅಂದಾಜು 624.6 ಕಿಮಿ ದೂರವಿದೆ.  ತಮ್ಮನ್ನು ಮುಲ್ತಾನ್ ವಿಮಾನ ನಿಲ್ದಾಣದ ವರೆಗೆ ಬಿಟ್ಟು ಬಿಡಿ ಎಂದು ಪ್ರಯಾಣಿಕರು ವಿಮಾನ  ಸಿಬ್ಬಂದಿಯಲ್ಲಿ ವಿನಂತಿಸಿದ್ದರು ಎಂದು ಪಿಟಿಐ ವರದಿ ಮಾಡಿದೆ.

No Comments

Leave A Comment