Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ರಿಯಾದ್: ಸೌದಿ ಅರೇಬಿಯ ದೊರೆ ಸಲ್ಮಾನ್, ರಾಷ್ಟ್ರೀಯ ಭದ್ರತಾ ಪಡೆಯ ನೇತೃತ್ವ ವಹಿಸಿದ್ದ ರಾಜಕುಮಾರನನ್ನು ಪದಚ್ಯುತಗೊಳಿಸಿದ್ದಾರೆ. ಜತೆಗೆ ನೂತನ ಭ್ರಷ್ಟಾಚಾರ ವಿರೋಧಿ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದ್ದಾರೆ.

ಸೌದಿ ಸ್ವಾಮ್ಯದ ಅಲ್-ಅರೇಬಿಯಾ ವಾರ್ತಾ ವಾಹಿತಿ ನಿನ್ನೆ ರಾತ್ರಿ ವರದಿ ಮಾಡಿದಂತೆ,ಭ್ರಷ್ಟಾಚಾರ ಆರೋಪಗಳ ಹಿನ್ನೆಲೆಯಲ್ಲಿ ರಾಜಕುಮಾರ ಮತ್ತು ಆತನ 11 ಅನುಚರರನ್ನು ಬಂಧಿಸಲಾಗಿದೆ.ಅಲ್ಲದೆ  25ಕ್ಕೂ ಹೆಚ್ಚು ಮಾಜಿ ಸಚಿವರನ್ನು ಸಹ ಇದೇ ಆರೋಪದಡಿಯಲ್ಲಿ ಬಂಧನಕ್ಕೆ ಒಳಪಡಿಸಲಾಗಿದೆ.

ನೂತನ ಭಷ್ಟಾಚಾರ ವಿರೋಧಿ ಸಮಿತಿಯ ಉಸ್ತುವಾರಿ ಸೌದಿಯ ರಾಜಕುಮಾರ ಮಹಮದ್ ಬಿನ್ ಸಲ್ಮಾನ್ ನಾಯಕತ್ವದಲ್ಲಿ ತನಿಖೆ ನಡೆದಿದೆ. ಈ ತನಿಖೆ ಪೂರ್ಣಗೊಂಡ ನಂತರ ಸೇನಾಪಡೆಯ ಮುಖ್ಯಸ್ಥನಾಗಿದ್ದ ಆಗಿದ್ದ ರಾಜಕುಮಾರನನ್ನು ಪದಚ್ಯುತಿಗೊಳಿಸಿ ಬಂಧಿಸಲಾಗಿದೆ. ಇದರೊಡನೆಯೇ ಹಲವಾರು ಮಾಜಿ ಸಚಿವರನ್ನು ಸಹ ವಶಕ್ಕೆ ಪಡೆಯಲಾಗಿದೆ.

2009 ರಲ್ಲಿ ಜಿಡ್ಡಾ ನಗರದಲ್ಲಿ ಸಂಭವಿಸಿದ ಪ್ರವಾಹ ಮತ್ತು ವರ್ಷಗಳ ಹಿಂದೆ ಹಲವಾರು ಜನರನ್ನು ಬಲಿ ಪಡೆದ ಮಾರಕ ವೈರಾಣು (ಮಿಡ್ಲ್ ಈಸ್ಟ್ ರೆಸ್‍ಪಿರೇಟರಿ ಸಿಂಡ್ರೋಮ್-ಎಂಇಆರ್‍ಎಸ್) ದುರ್ಘಟನೆಯಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡುವ ವಿಚಾರದಲ್ಲಿ ಭಾರೀ ಭ್ರಷ್ಠಾಚಾರ ನಡೆದಿದೆ ಎಂದು ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸಮಿತಿ ತನಿಖೆ ನಡೆಸಿ ಈ ಮೇಲಿನ ಕ್ರಮ ಕೈಗೊಂಡಿದೆ.

ಸಾರ್ವಜನಿಕರ ಹಣವನ್ನು ದುರುಪಯೋಗ ಪಡಿಸಿಕೊಂಳ್ಳುವ ಭ್ರಷ್ಠಾಚಾರಿಗಳನ್ನು ಶಿಕ್ಷಿಸುವ ಉದ್ದೇಶದಿಂದ ಇವರ ಬಂಧನವಾಗಿದೆ ಎಂದು ಸೌದಿ ದೊರೆ ಹೇಳಿದ್ದಾರೆ. ಸೌದಿ ದೊರೆಯ ಈ ಕ್ರಮಕ್ಕೆ ಪರಸ್ಪರ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು ಮುಂದೆ ಇದೊಂದು ಹೊಸ ವಿಒವಾದಕ್ಕೆ ಎಡೆಮಾಡಿಕೊಡುವ ಸಾಧ್ಯತೆ ಇದೆ.

No Comments

Leave A Comment