Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಹಿಂದಿನ ಸರ್ಕಾರಗಳು ಸರ್ದಾರ್ ಪಟೇಲರ ಪರಂಪರೆಯನ್ನು ನಿರ್ಲಕ್ಷಿಸಿದ್ದವು: ಪ್ರಧಾನಿ ಮೋದಿ

ನವದೆಹಲಿ: ಈ ಹಿಂದೆ ಇದ್ದ ಸರ್ಕಾರಗಳು ಉಕ್ಕಿನ ಮನುಷ್ಯ ಸರ್ದಾರ್ ಪಟೇಲರ ಪರಂಪರೆಯನ್ನು ನಿರ್ಲಕ್ಷಿಸಿದ್ದವು ಎಂದು ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ಮಂಗಳವಾರ ಹೇಳಿದ್ದಾರೆ.

ದೇಶಕಂಡ ಅತ್ಯುನ್ನತ ನಾಯಕರಲ್ಲಿ ಒಬ್ಬರಾದ ಸರ್ದಾರ್ ವಲ್ಲಭಬಾಯಿ ಪಟೇಲ್ ಜನ್ಮದಿನ ನಿಮಿತ್ತ ರಾಷ್ಟ್ರೀಯ ಏಕತಾ ದಿವಸ್ ಅಂಗವಾಗಿ ದೆಹಲಿಯಲ್ಲಿ ‘ರನ್ ಫಾರ್ ಯೂನಿಟಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಧಾನಿ  ಮೋದಿ, ಬಳಿಕ ಜನತೆಯನ್ನು ಉದ್ದೇಶಿಸಿ ಭಾಷಣ ಮಾಡಿದರು. ಈ ವೇಳೆ ಈ ಹಿಂದಿನ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪ್ರಧಾನಿ ಮೋದಿ, ಈ ಹಿಂದಿನ ಸರ್ಕಾರಗಳು ಸೃರ್ದಾರ್ ಪಟೇಲ್ ರ ಏಕೀಕೃತ ಭಾರತ  ಪರಂಪರೆಯನ್ನು ನಿರ್ಲಕ್ಷಿಸಿದ್ದವು ಎಂದು ಹೇಳಿದರು.

ಅಂತೆಯೇ ಭಾರತ ವಿವಿಧತೆಯಲ್ಲಿ ಏಕತೆ ಎಂಬ ದ್ಯೇಯೋದ್ದೇಶದೊಂದಿಗೆ ಮುಂದೆ ಸಾಗುತ್ತಿದೆ. ವಿವಿಧತೆಯಲ್ಲಿ ಏಕತೆ ನಮ್ಮ ದೇಶದ ವಿಶೇಷತೆಯಾಗಿದೆ. ಆದರೆ ಈ ಸರ್ದಾರ್ ಪಟೇಲರ ಚಿಂತನೆಗಳು ನಿರ್ಲಕ್ಷಕ್ಕೀಡಾಗಿದ್ದವು.  ಆದರೆ ದೇಶದ ಜನತೆ ಹಾಗೂ ಯುವಕರು ಅವರ ಚಿಂತನೆಗಳನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇಂದಿಗೂ ದೇಶದ ಯುವರಿಗೆ ಪಟೇಲರು ಸ್ಪೂರ್ತಿಯಾಗಿದ್ದು, ಅವರ ಚಿಂತನೆಗಳನ್ನು ಆದರ್ಶವಾಗಿ ಸ್ವೀಕರಿಸಿದ್ದಾರೆ.  ಪಟೇಲರು ತಮ್ಮ ಚಿಂತನೆಗಳು, ಕೌಶಲ್ಯಗಳು, ಬದ್ಥತೆಗಳಿಂದ ದೇಶ ವಿಭಜನೆ ಬಳಿಕ ಆಗಬಹುದಾಗಿದ್ದ ಗಂಭೀರ ಸಮಸ್ಯೆಗಳಿಂದ ರಕ್ಷಿಸಿದ್ದಾರೆ. ಅಂತೆಯೇ ಭಾರತ ಮತ್ತೆ ಸಣ್ಣ ರಾಜ್ಯರಾಜ್ಯಗಳಾಗಿ ವಿಭಜನೆಯಾಗುವುದನ್ನು  ತಡೆದಿದ್ದಾರೆ. ಅವರ ಇಂತಹ ಕಾರ್ಯಗಳೇ ಅವರನ್ನು ಇಂದು ದೇಶದ ಜನತೆ ಸ್ಪೂರ್ತಿಯಾಗಿ ಸ್ವೀಕರಿಸುವಂತೆ ಮಾಡಿದೆ.

ಸರ್ದಾರ್ ಪಟೇಲರ ನೆನಪಿನಾರ್ಥ ಕೇಂದ್ರ ಸರ್ಕಾರ ರಾಷ್ಟ್ರೀಯ ಏಕತಾ ದಿವಸ್ ಆಚರಣೆ ಮಾಡುತ್ತಿದೆ. ಬಹುಶಃ ಸ್ವರ್ಗದಲ್ಲಿರುವ ಅವರ ಆತ್ನ ತಮ್ಮ ದೇಶದ ಜನರು ಇನ್ನೂ ತಮ್ಮನ್ನು ಮರೆತಿಲ್ಲ ಎಂಬ ವಿಚಾರವನ್ನು ತಿಳಿದು  ಸಂತಸ ಪಡುತ್ತಿರಬಹುದು ಎಂದು ಮೋದಿ ಹೇಳಿದರು.

ಈ ಹಿಂದೆಯೇ ಅಂದರೆ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸರ್ದಾರ್ ಪಟೇಲರ ಜನ್ಮ ದಿನವನ್ನು ಪ್ರಸ್ತಾಪಿಸಿದ್ದ ಮೋದಿ ರನ್ ಫಾರ್ ಯೂನಿಟಿಯಲ್ಲಿ ಪಾಲ್ಗೊಳ್ಳುವಂತೆ ಜನತೆಯಲ್ಲಿ ಮನವಿ ಮಾಡಿದ್ದರು. ಅಂತೆಯೇ ಇಂದು  ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪುಣ್ಯತಿಥಿ ಕಾರಣ ಅವರಿಗೂ ಕಾರ್ಯಕ್ರಮದಲ್ಲೇ ಗೌರವ ಸಮರ್ಪಣೆ ಮಾಡಿದ್ದರು.

No Comments

Leave A Comment