Log In
BREAKING NEWS >
ಅಮರನಾಥ ಯಾತ್ರೆ ವೇಳೆ ಕದನ ವಿರಾಮ ಮುಂದುವರೆಸಲು ಸರ್ಕಾರ ನಿರ್ಧಾರ: ಭದ್ರತಾ ಸಂಸ್ಥೆಗಳ ವಿರೋಧ....

ಕಾಮನ್ ವೆಲ್ತ್ ಶೂಟಿಂಗ್ ಚಾಂಪಿಯನ್ ಷಿಪ್: ಶೂಟರ್ ಹೀನಾ ಸಿಧುಗೆ ಚಿನ್ನದ ಗರಿ!

ಬ್ರಿಸ್ಬೇನ್: ಭಾರತದ ಯುವ ಶೂಟರ್ ಹೀನಾ ಸಿಧು ಮಂಗಳವಾರ ಕಾಮನ್ ವೆಲ್ತ್ ಶೂಟಿಂಗ್ ಚಾಂಪಿಯನ್ ಷಿಪ್ ನಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.

ಆಸ್ಟ್ರೇಲಿಯಾದ ಬ್ರಿಸ್ಬೇನ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಶೂಟಿಂಗ್ ಚಾಂಪಿಯನ್ ಷಿಪ್ ನಲ್ಲಿ ಇಂದು ನಡೆದ ಫೈನಲ್ ಪಂದ್ಯದಲ್ಲಿ ಹೀನಾ ಸಿಧು ಒಟ್ಟು 248.08 ಅಂಕಗಳೊಂದಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಫೈನಲ್  ನಲ್ಲಿ ಮಹಿಳೆಯರ 10 ಮೀ ಏರ್ ಪಿಸ್ತೂಲ್ ಪಂದ್ಯದಲ್ಲಿ ಹೀನಾ ಚಿನ್ನದ ಪದಕ ಗಳಿಸಿದ್ದಾರೆ. ಇನ್ನು ಹೀನಾಗೆ ಆಸ್ಟ್ರೇಲಿಯಾದ ಶೂಟರ್ ಎಲೆನಾ ಗಾಲಿಯಾಬೊವಿಚ್ ಅವರು ತೀವ್ರ ಪೈಪೋಟಿ ನೀಡಿದರಾದರೂ 238.2  ಅಂಕಗಳನ್ನಷ್ಟೇ ಗಳಿಸಲು ಶಕ್ತರಾದರು. ಆ ಮೂಲಕ ಹೀನಾ ಗಿಂತ ಸುಮಾರು 10 ಅಂಕಗಳ ಅಂತರದಲ್ಲಿ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟು ಬೆಳ್ಳಿ ಪದಕ ಪಡೆದರು.

ಮತ್ತೋರ್ವ ಆಸ್ಟ್ರೇಲಿಯಾದ ಆಟಗಾರ್ತಿ ಕ್ರಿಸ್ಟಿ ಗಿಲ್ಮನ್ ಅವರು ಒಟ್ಟು 213 ಅಂಕಗಳನ್ನು ಗಳಿಸುವ ಮೂಲಕ ಕಂಚಿನ ಪದಕಕ್ಕೆ ತೃಪ್ಚಿ ಪಟ್ಟುಕೊಂಡರು.

No Comments

Leave A Comment