Log In
BREAKING NEWS >
ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನಕ್ಕೆ ಮೇ ೧೦ರ೦ದು ಶ್ರೀಗೋಕರ್ಣಮಠಾಧೀಶರು ತಮ್ಮ ಶಿಷ್ಯರೊ೦ದಿಗೆ ಆಗಮಿಸಲಿದ್ದು ೫ದಿನಗಳ ಕಾಲ ಮೊಕ್ಕ೦ ಹೂಡಲಿದ್ದಾರೆ....

ಮಹಿಳಾ ಹಾಕಿ ತಂಡ ಏಷ್ಯಾ ಕಪ್‌ ಹಾಕಿ: ಸಿಂಗಾಪುರ ವಿರುದ್ಧ ಭಾರತಕ್ಕೆ ಅಮೋಘ ಜಯ

ಕಾಕಮಿಗಹಾರ: ಇಲ್ಲಿ ನಡೆದ ‘ಮಹಿಳೆಯರ ಏಷ್ಯಾ ಕಪ್‌–2017’ ಹಾಕಿ ಪಂದ್ಯದಲ್ಲಿ ಶನಿವಾರ ಭಾರತ ಮಹಿಳಾ ಹಾಕಿ ತಂಡ ಸಿಂಗಾಪುರ ತಂಡದ ವಿರುದ್ಧ ಅಮೋಘ ಜಯ ಸಾಧಿಸಿತು.

ಭಾತರ ತಂಡ ಸಿಂಗಾಪುರ ತಂಡವನ್ನು 10–0 ಗೋಲುಗಳಿಂದ ಪರಾಭವಗೊಳಿಸಿ, ಆರಂಭಿಕ ಪಂದ್ಯದಲ್ಲಿ ಭರ್ಜರಿ ಗೆಲುವಿನ ನಗೆ ಬೀರಿತು.

ಗೋಲು ಗಳಿಸಿದ ವಿವರ
ನವನೀತ್‌ ಕೌರ್‌(3 ಮತ್ತು 41 ನೇ ನಿಮಿಷದಲ್ಲಿ ಗೋಲು ಗಳಿಸಿದರು), ರಾಣಿ (15 ಮತ್ತು 18ನೇ ನಿಮಿಷ), ನವಜ್ಯೋತ್‌ ಕೌರ್‌( 30 ಮತ್ತು 50ನೇ ನಿಮಿಷ) ತಲಾ ಎರಡು ಗೋಲು ಗಳಿಸಿದರು.

ಲಾರೆಸ್ಮಿಯಾಮಿ(18ನೇ ನಿ.), ಡೀಪ್‌ ಗ್ರೇಸ್‌ ಎಕ್ಕ(25ನೇ ನಿ.), ಗುರ್ಜಿತ್ ಕೌರ್(41ನೇ ನಿ.), ಸೋನಿಕಾ(45ನೇ ನಿ.) ತಲಾ ಒಂದು ಗೋಲು ಗಳಿಸುವ ಮೂಲಕ ತಂಡಕ್ಕೆ ಉತ್ತಮ ಮುನ್ನಡೆ ನೀಡಿ, ಗೆಲುವಿಗೆ ಕಾರಣರಾದರು.

No Comments

Leave A Comment