Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವರಾತ್ರೆಯ "ಚ೦ಡಿಕಾ ಹೋಮ " ಕಾರ್ಯಕ್ರಮವು 19-10-2018ರ೦ದು ಜರಗಲಿದೆ....

ಪ್ರೊ ಕಬಡ್ಡಿ ಲೀಗ್‌ನ ಫೈನಲ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಪಟ್ನಾ ಪೈರೆಟ್ಸ್‌

ಚೆನ್ನೈ: ಇಲ್ಲಿನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್‌ನ ಫೈನಲ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಪಟ್ನಾ ಪೈರೆಟ್ಸ್‌ ತಂಡ ಗುಜರಾತ್ ಫಾರ್ಚೂನ್‌ಜೈಂಟ್ಸ್ ಎದುರು 55–38 ಪಾಯಿಂಟ್ಸ್‌ ಅಂತರದ ಜಯ ಸಾಧಿಸಿದೆ.

ಇದರೊಂದಿಗೆ ಪ್ರೊ ಕಬಡ್ಡಿ ಲೀಗ್‌ನಲ್ಲಿ ಮೂರು ಬಾರಿ ಚಾಂಪಿಯನ್‌ ಆದ ಮತ್ತು ಹ್ಯಾಟ್ರಿಕ್‌ ಪ್ರಶಸ್ತಿ ಗೆದ್ದ ಮೊದಲ ತಂಡ ಎಂಬ ಶ್ರೇಯಕ್ಕೆ ಪ್ರದೀಪ್ ನರ್ವಾಲ್ ಬಳಗ ಪಾತ್ರವಾಗಿದೆ.

ಇದೇ ಮೊದಲ ಬಾರಿಗೆ ಲೀಗ್‌ಗೆ ಪ್ರವೇಶ ಪಡೆದಿದ್ದ ಗುಜರಾತ್ ಫಾರ್ಚೂನ್‌ಜೈಂಟ್ಸ್ ತಂಡ ಅಮೋಘ ಪ್ರದರ್ಶನದ ಮೂಲಕ ಅಂತಿಮ ಘಟ್ಟ ತಲುಪಿತ್ತು. ಎಲ್ಲ ವಿಭಾಗಗಳಲ್ಲೂ ಬಲಿಷ್ಠವಾಗಿದ್ದ ಜೈಂಟ್ಸ್‌ ಸಹಜವಾಗಿಯೇ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎನಿಸಿತ್ತು. ಆದರೆ, ಚೊಚ್ಚಲ ಪ್ರಶಸ್ತಿ ಗೆಲ್ಲುವ ಈ ತಂಡದ ಕನಸಿಗೆ ಪಟ್ನಾ ಪೈರೆಟ್ಸ್ ಅಡ್ಡಿಯಾಯಿತು.

ಲೀಗ್‌ ಹಾಗೂ ನಿರ್ಣಾಯಕ ಕ್ವಾಲಿಫೈಯರ್‌ ಪಂದ್ಯದಲ್ಲಿ ತಂಡದ ಪರ ಉಪಯುಕ್ತ ಆಟವಾಡಿದ್ದ ಪಟ್ನಾ ನಾಯಕ ಪ್ರದೀಪ್ ನರ್ವಾಲ್‌, ಫೈನಲ್‌ನಲ್ಲೂ ಅತ್ಯುತ್ತಮವಾಗಿ ಆಡಿದರು. ಅವರು ರೈಡಿಂಗ್‌ ಮೂಲಕ ಒಟ್ಟು 19 ಪಾಯಿಂಟ್ಸ್‌ ಗಳಿಸಿದರು.

No Comments

Leave A Comment