Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಕರ್ನಾಟಕ ಭೂ ಸುಧಾರಣಾ ಕಾಯ್ದೆ-2015 ಗೆ ರಾಷ್ಟ್ರಪತಿ ಅಂಕಿತ ಖಾಸಗಿ ಭೂಮಿಯಲ್ಲಿ ವಾಸಿಸುವವನೆ ಮನೆ ಒಡೆಯ: ಟಿ.ಬಿ.ಜಯಚಂದ್ರ

ತುಮಕೂರು: ಖಾಸಗಿ ಜಮೀನಿನಲ್ಲಿ ವಾಸಿಸುತ್ತಿರುವ ಗೊಲ್ಲರಹಟ್ಟಿ, ತಾಂಡಾ, ವಡ್ಡರ ಹಟ್ಟಿ ಸೇರಿದಂತೆ ವಿವಿಧ ರೀತಿಯ ಜನರಿಗೆ ವಾಸದ ಹಕ್ಕು ಕಲ್ಪಿಸುವ ಕರ್ನಾಟಕ ಭೂ ಸುಧಾರಣಾ ಕಾಯ್ದೆ-2015 ಗೆ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ರಾಷ್ಟ್ರಪತಿಯವರು ಅ.20 ರಂದು ಅಂಕಿತ ಹಾಕಿದ್ದಾರೆ. ಅ.28 ರಂದು ರಾಜ್ಯ ಸರ್ಕಾರಕ್ಕೆ ಅಂಕಿತ ಹಾಕಿದ ಪ್ರತಿ ಬಂದಿದೆ ಎಂದು ಹೇಳಿದರು. ಇಂದು ಸಂಜೆ  4  ಗಂಟೆಗೆ ರಾಜ್ಯ ಸರ್ಕಾರವು ಗೆಜೆಟ್ ನೋಟಿಫಿಕೇಶನ್ ಹೊರಡಿಸಲಿದೆ ಎಂದು ತಿಳಿಸಿದರು.

ಖಾಸಗಿ ಜಮೀನಿನಲ್ಲಿ ಹಲವು ವರ್ಷಗಳಿಂದ ವಾಸಿಸಿಕೊಂಡು ಬಂದವರಿಗೆ ಈ ದಿನದಿಂದ ಒಂದು ವರ್ಷದವರೆಗೆ ಜಿಲ್ಲಾಧಿಕಾರಿ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿಗಳನ್ನು ಪರಿಶೀಲಿಸಿ ಸರ್ಕಾರವು ವಾಸಿಸುವ ವ್ಯಕ್ತಿಗೆ ವಾಸದ ಹಕ್ಕು ನೀಡಲಿದೆ. ಖಾಸಗಿ ಜಮೀನುದಾರರಿಗೆ ಪರಿಹಾರ ನೀಡಲಾಗುತ್ತದೆ ಎಂದು ವಿವರಿಸಿದರು.

ದೇವರಾಜ್ ಅರಸು ಅವರು ಉಳುವವನೆ ಒಡೆಯ ಎಂಬ ಕಾಯ್ದೆ ಜಾರಿಗೊಳಿಸಿ ಕ್ರಾಂತಿ ಮಾಡಿದರು. ಸಿದ್ದರಾಮಯ್ಯ ಅವರ ಸರ್ಕಾರವು ಕರ್ನಾಟಕ ಭೂ ಸುಧಾರಣೆ ಕಾಯ್ದೆ_2015  ಜಾರಿಗೆ ತರುವ ಮೂಲಕ ವಾಸಿಸುವನೆ ಒಡೆಯ ಎಂಬ ಕ್ರಾಂತಿಕಾರಿ ಹೆಜ್ಜೆ ಇರಿಸಿದೆ ಎಂದರು.
ಹಲವು ದಶಕಗಳಿಂದ ಎಲ್ಲೊ ಖಾಸಗಿ ಜಮೀನುಗಳಲ್ಲಿ ಹಟ್ಟಿ , ತಾಂಡಾ, ವಡ್ಡರಹಟ್ಟಿ, ಕುರುಬರಹಟ್ಟಿ, ಹಾಡಿ, ದೊಡ್ಡಿ. ಪಾಳ್ಯಗಳನ್ನು  ಕಟ್ಟಿಕೊಂಡು ಸಾಕಷ್ಟು ಕುಟುಂಬಗಳು ವಾಸಿಸುತ್ತಿವೆ.

ಅವರಿಗೆ ಯಾವುದೇ ರೀತಿಯ ವಾಸದ ಹಕ್ಕು ಇರಲಿಲ್ಲ. ಜಮೀನಿನ ಮಾಲೀಕರು ತೆರವುಗೊಳಿಸಿದರೆ ಇವರು ಮತ್ತೊಂದು ಕಡೆ ವಾಸಕ್ಕೆ ಸ್ಥಳ ಹುಡುಕಿಕೊಳ್ಳಬೇಕಿತ್ತು. ಈ ಸಮಸ್ಯೆ ಪರಿಹರಿಸಿ ಅವರಿಗೆ ವಾಸದ ಹಕ್ಕು ಕಲ್ಪಿಸಲು ಸರ್ಕಾರ ಈ ತೀರ್ಮಾನ ಮಾಡಿದೆ ಎಂದು ವಿವರಿಸಿದರು.
ಹೆಚ್ಚಿನ ವಿವರ ಗೆಜೆಟ್ ನೋಟಿಫಿಕೇಶನ್ ನಲ್ಲಿ ಲಭ್ಯವಾಗಲಿದೆ ಎಂದು ತಿಳಿಸಿದರು.

No Comments

Leave A Comment