Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಬಿಜೆಪಿ ತೊರೆದ ಮಾಜಿ ಸಚಿವ ಸಿ.ಎಚ್. ವಿಜಯ್ ಶಂಕರ್

ಬೆಂಗಳೂರು: ಕುರುಬ ಸಮುದಾಯದ ನಾಯಕ, ಮಾಜಿ ಸಚಿವ ಸಿ.ಎಚ್‌.ವಿಜಯ್‌ ಶಂಕರ್‌ ಅವರು ಇಂದು ಬಿಜೆಪಿ ತೊರೆದಿದ್ದಾರೆ.
ರಾಜ್ಯ ಬಿಜೆಪಿಯ ರೈತ ಮೋರ್ಚ ರಾಜ್ಯಾಧ್ಯಕ್ಷರಾಗಿದ್ದ ವಿಜಯ್ ಶಂಕರ್ ತಮ್ಮ ರಾಜೀನಾಮೆಯನ್ನು ಬಿ ಎಸ್ ಯಡಿಯೂರಪ್ಪ ಅವರಿಗೆ ಸಲ್ಲಿಸಿದ್ದಾರೆ.
ಹಲವು ದಿನಗಳಿಂದ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದ ವಿಜಯ್‌ ಶಂಕರ್ ಮೊನ್ನೆ ಮೈಸೂರಿನಲ್ಲಿ ನಡೆದ ಬೃಹತ್ ರೈತ ಸಮಾವೇಶದಲ್ಲಿಯೂ ಭಾಗವಹಿಸಿರಲಿಲ್ಲ. ಮೈಸೂರು ಭಾಗದ ಪ್ರಭಾವಿ ನಾಯಕರಾಗಿದ್ದ ಇವರ ರಾಜೀನಾಮೆಯ ಕಾರಣ ಈ ಭಾಗದಲ್ಲಿ ಬಿಜೆಪಿಗೆ ತುಸು ಹಿನ್ನೆಡೆಯಾಗಿದೆ.
ಹುಣಸೂರಿನಿಂದ 1994 ,98 ರಲ್ಲಿ 2 ಬಾರಿ ಶಾಸಕರಾಗಿದ್ದ ವಿಜಯಶಂಕರ್‌ ಅವರು ಮೈಸೂರು ಕ್ಷೇತ್ರದಿಂದ 2004 ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರನ್ನು ಮಣಿಸಿ 12 ನೇ ಲೋಕಸಭೆಗೆ ಆಯ್ಕೆಯಾಗಿದ್ದರು.
2010 ರಿಂದ 2016 ರವರೆಗೆ ವಿಧಾನಪರಿಷತ್‌ ಸದಸ್ಯರಾಗಿದ್ದ ವಿಜಯ್ ಶಂಕರ್ ಜಗದೀಶ್‌ ಶೆಟ್ಟರ್‌ ಅವರ ಸಂಪುಟದಲ್ಲಿ ಅರಣ್ಯ ಮತ್ತು ಪರಿಸರ ಖಾತೆ ನಿರ್ವಹಿಸಿದ್ದರು. 2009 ರ ಲೋಕಸಭಾ ಚುನಾವಣೆಯಲ್ಲಿ ಎಚ್‌.ವಿಶ್ವನಾಥ್‌ ಅವರ ವಿರುದ್ದ ಸೋಲು ಕಂಡಿದ್ದ ಇವರಿಗೆ 2014 ರ ಲೋಕಸಭಾ ಚುನಾವಣೆ ಅವಧಿಯಲ್ಲಿ ಮೈಸೂರು ಕ್ಷೇತ್ರದ ಬದಲಿಗೆ ಹಾಸನದಿಂದ ಟಿಕೆಟ್ ನೀದಲಾಗಿತ್ತು.

No Comments

Leave A Comment