Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಸುನಂದಾ ಪುಷ್ಕರ್ ಸಾವು: ರಾಜಕೀಯ ಹಿತಾಸಕ್ತಿಯ ಮನವಿ ಎಂದು ಹೇಳಿ ಸ್ವಾಮಿ ಅರ್ಜಿ ವಜಾ!

ನವದೆಹಲಿ: ಕಾಂಗ್ರೆಸ್ ಸಂಸದ ಶಶಿತರೂರ್ ಪತ್ನಿ ಸುನಂದಾ ಪುಷ್ಕರ್ ನಿಗೂಢ ಸಾವಿನ ಎಸ್ ಐಟಿ ತನಿಖೆ ಮೇಲೆ ನ್ಯಾಯಾಲಯ ಮೇಲ್ವಿಚಾರಣೆ ನೋಡಿಕೊಳ್ಳಬೇಕೆಂದು ಕೋರಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.

ನ್ಯಾಯಮೂರ್ತಿ ಎಸ್ ಮುರುಳೀಧರ್ ಮತ್ತು ಐ ಎಸ್  ಮೆಹ್ತಾ ಅವರನ್ನೊಳಗೊಂಡ ನ್ಯಾಯಪೀಠ,  ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿರುವುದು ರಾಜಕೀಯ ಹಿತಾಸಕ್ತಿಯ ಮನವಿಯಾಗಿದ್ದು,  ಅವರ ಪಿಐಎಲ್ ಅನ್ನು ಸ್ವೀಕರಿಸಲಾಗುವುದಿಲ್ಲ ಎಂದು ಹೇಳಿ ವಜಾಗೊಳಿಸಿದೆ.

ಈ ಮೊದಲು ನ್ಯಾಯಾಲಯ ಏನು ಆದೇಶಿಸಿತ್ತೋ ಅದರಂತೆ ನಡೆಯಬೇಕು, ಅದನ್ನು ಮತ್ತೆ ಬದಲಾಯಿಸಲು ಸಾಧ್ಯವಿಲ್ಲ, ಎಸ್ ಐಟಿ ತನಿಖೆ ನಡೆಸುತ್ತಿದೆ. ಸುನಂದಾ ಪುಷ್ಕರ್ ಪತಿ ಶಶಿ ತರೂರ್ ಪ್ರಕರಣದ ತನಿಖೆಯಲ್ಲಿ ಯಾವುದೇ ರೀತಿಯಸಲ್ಲಿ ಭಾಗಿಯಾಗಿಲ್ಲ ಎಂದು ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರು ದೆಹಲಿ ಹೈಕೋರ್ಟ್ ಗೆ ಮಾಹಿತಿ ನೀಡಿತ್ತು.

ಕೆಲವರು ನ್ಯಾಯಾಂಗ ಪ್ರಕ್ರಿಯೆಗಳನ್ನ ತಮ್ಮ ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳಲು ಯತ್ನಿಸುತ್ತಾರೆ ಹೀಗಾಗಿ ಕೋರ್ಟ್ ಗಳು ಎಚ್ಚರಿಕೆಯಿಂದ ನ್ಯಾಯಾಂಗ ಪ್ರಕ್ರಿಯೆಗಳನ್ನ ನಡೆಸಬೇಕು  ಎಂದು ದೆಹಲಿ ಹೈಕೋರ್ಟ್ ತಿಳಿಸಿದೆ.

ಇನ್ನೂ ತಾವೂ ಯಾವುದೇ ಮಾಹಿತಿಯನ್ನು ಮುಚ್ಚು ಮರೆ ಮಾಡಿಲ್ಲ, ಸೂಕ್ತವಾದ ಆರೋಪದ ಮೇಲೆಯೇ ತಾವು ಪಿಐಎಲ್ ಸಲ್ಲಿಸಿರುವುದಾಗಿ ಸ್ವಾಮಿ ಹೇಳಿದ್ದಾರೆ.

No Comments

Leave A Comment