Log In
BREAKING NEWS >
2020 ಮು೦ದಿನ ಪರ್ಯಾಯ ಮಹೋತ್ಸವವನ್ನು ನೆರವೇರಿಸಲಿರುವ ಶ್ರೀಅದಮಾರು ಮಠದ ಪರ್ಯಾಯಕ್ಕೆ ಶುಕ್ರವಾರದ೦ದು ಬಾಳೆ ಮಹೂರ್ತ-ಬೆಳಿಗ್ಗೆ 7.30ಕ್ಕೆ

ಸರ್ಜಿಕಲ್ ಸ್ಟ್ರೈಕ್ ವೇಳೆ ಗಡಿ ಉಲ್ಲಂಘಿಸಿ ಹೋದ ಯೋಧನಿಗೆ 3 ತಿಂಗಳು ಜೈಲು ಶಿಕ್ಷೆ

ನವದೆಹಲಿ: ಕಳೆದ ವರ್ಷ ಸರ್ಜಿಕಲ್ ಸ್ಟ್ರೈಕ್ ಸಮಯದಲ್ಲಿ ಆಕಸ್ಮಿಕವಾಗಿ ಗಡಿ ಉಲ್ಲಂಘಿಸಿ ಕಳೆದ ಜನವರಿಯಲ್ಲಿ ಭಾರತಕ್ಕೆ ಹಸ್ತಾಂತರಿಸಲಾಗಿದ್ದ ಭಾರತೀಯ ಯೋಧ ಆರೋಪಿ ಎಂದು ಸಾಬೀತುಪಡಿಸಿರುವ ಸೇನಾ ನ್ಯಾಯಾಲಯ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ಚಂದು ಬಾಬುಲಾಲ್ ಚವನ್ ಎಂಬ ಯೋಧನಿಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿರುವ ಸೇನಾ ನ್ಯಾಯಾಲಯ, ಶಿಕ್ಷೆಯ ಪ್ರಮಾಣವನ್ನು ಅಧಿಕಾರಿಗಳು ಇನ್ನೂ ಅನುಮೋದಿಸಿಲ್ಲ.

ತಮ್ಮ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸುವ ಅವಕಾಶ ಚವನ್ ಅವರಿಗಿದೆ.

37 ರಾಷ್ಟ್ರೀಯ ರೈಫಲ್ಸ್  ವಿಭಾಗದಲ್ಲಿ ಕರ್ತವ್ಯ ನಿರತರಾಗಿದ್ದ ಚವನ್ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಸರ್ಜಿಕಲ್ ಸ್ಟ್ರೈಕ್ ಸಂದರ್ಭದಲ್ಲಿ ಕಾಶ್ಮೀರದಲ್ಲಿ ಗಡಿ ಉಲ್ಲಂಘಿಸಿ ಪಾಕ್ ಒಳಗೆ ಕಾಲಿಟ್ಟಿದ್ದರು. ನಂತರ ಜನವರಿಯಲ್ಲಿ ಪಾಕಿಸ್ತಾನ ಚವನ್ ರನ್ನು ಭಾರತಕ್ಕೆ ಹಸ್ತಾಂತರಿಸಿತ್ತು.

ಮಹಾರಾಷ್ಟ್ರದ ಧುಲೆ ಜಿಲ್ಲೆಯ ಬೊರ್ವಿಹಿರ್ ಗ್ರಾಮಕ್ಕೆ ಸೇರಿದ ಚವನ್ ಬಂಧಿತರಾದ ಸುದ್ದಿ ಕೇಳಿ ಅವರ ಅಜ್ಜಿ ಆಘಾತದಿಂದ ತೀರಿಹೋಗಿದ್ದರು.

No Comments

Leave A Comment