Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಕೇರಳದಲ್ಲಿ ಇಸಿಸ್ ಉಗ್ರ ಸಂಘಟನೆಯ ಬೃಹತ್ ಜಾಲ ಪತ್ತೆ!

ತಿರುವನಂತಪುರಂ: ಕೇರಳದ ಕಣ್ಣೂರಿನಲ್ಲಿ ವಿಶ್ವದ ಕುಖ್ಯಾತ ಉಗ್ರಗಾಮಿ ಸಂಘಟನೆ ಇಸಿಸ್ ನ ಬೃಹತ್ ಜಾಲವನ್ನು ಪತ್ತೆ ಮಾಡಿದ್ದು, ಸಂಘಟನೆಯ ಪ್ರಮುಖ ಶಂಕಿತ ಉಗ್ರ ಹಾಗೂ ಭಾರತದಲ್ಲಿ ಯುವಕರನ್ನು ಉಗ್ರ ಸಂಘಟನೆಗೆ  ಸೆಳೆಯುತ್ತಿದ್ದ ರೂವಾರಿ ಸೇರಿದಂತೆ ಒಟ್ಟು ಐವರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಕಣ್ಣೂರಿನಲ್ಲಿ ಕಾರ್ಯಾಚರಣೆ ನಡೆಸಿದ ಕೇರಳ ಪೊಲೀಸರು ಶಂಕಿತ ಉಗ್ರ ಹಾಗೂ ಭಾರತದಲ್ಲಿ ಯುವಕರನ್ನು ಉಗ್ರ ಸಂಘಟನೆಗೆ ಸೆಳೆಯುತ್ತಿದ್ದ ಪ್ರಮುಖ ರೂವಾರಿ ಯುಕೆ ಹಮ್ಸಾ ಅಥವಾ ತಾಲಿಬಾನ್  ಎಂಬಾತನೂ ಸೇರಿದಂತೆ ಒಟ್ಟು ಐವರನ್ನು ಬಂಧಿಸಿದ್ದಾರೆ. ಅಚ್ಚರಿ ವಿಚಾರವೆಂದರೆ ಬಂಧಿತ ತಾಲಿಬಾನ್ ಹಮ್ಸಾ ಇಸಿಸ್ ನಿಜವಾದ ಇಸ್ಲಾಮ್ ಎಂದು ಕೂಗಿ ಹೇಳಿದ್ದಾನೆ ಎಂದು ತಿಳಿದುಬಂದಿದೆ.

ಪೊಲೀಸರು ನೀಡಿರುವ ಮಾಹಿತಿಯಂತೆ ತಾಲಿಬಾನ್ ಹಮ್ಸಾ 1998ರಿಂದಲೂ ಉಗ್ರ ಸಂಘಟನೆ ಪರ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಬಹ್ರೇನ್ ನಲ್ಲಿ ಅಲ್ ಅನ್ಸರ್ ಎಂಬ ಹೆಸರಿನ ಸಂಘಟನೆಯ ಹೆಸರಲ್ಲಿ ಕಾರ್ಯಾಚರಣೆ  ನಡೆಸುತ್ತಿದ್ದ. ಅಲ್ಲಿಯೇ ಇಸಿಸ್ ಸಂಘಟನೆಯ ರಹಸ್ಯ ತರಬೇತಿ ಕೇಂದ್ರ ಸ್ಥಾಪಿಸಿ ಇಸಿಸ್ ಪರ ಒಲವು ಹೊಂದಿರುವ ಯುವಕರನ್ನು ಸೆಳೆದುಕೊಂಡು ಅವರನ್ನು ಉಗ್ರಗಾಮಿಗಳಾಗಿ ತಯಾರು ಮಾಡುತ್ತಿದ್ತ. ಈತ ತಯಾರು ಮಾಡಿದ  ಉಗ್ರರ ಪೈಕಿ ಭಾರತದಿಂದ ತೆರಳಿದ ಸುಮಾರು ಯುವಕರು ಕೂಡ ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸ್ತುತ ತಾಲಿಬಾನ್ ಹಂಸಾ ಜೊತೆಗೇ 42 ವರ್ಷದ ಮನಾಫ್ ರೆಹಮಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಆರು ತಿಂಗಳ ಹಿಂದೆ ಸಿರಿಯಾದಲ್ಲಿ ಇಸಿಸ್ ಉಗ್ರ ಸಂಘಟನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ಹಮ್ಸಾ  ನಿರ್ದೇಶನದ ಮೇರೆಗೆ ಈತ ಆರು ತಿಂಗಳ ಹಿಂದೆ ಭಾರತಕ್ಕೆ ಬಂದಿದ್ದ. ಇತ್ತೀಚೆಗೆ ಕರ್ನಾಟಕದ ಮಂಗಳೂರು ವಿಮಾನ ನಿಲ್ದಾಣದ ಮೂಲಕ ತೆರಳುವಾಗ ಅನುಮಾನಗೊಂಡ ಅಧಿಕಾರಿಗಳು ಈತನನ್ನು ವಿಚಾರಿಸಿದ್ದರು ಎಂದು  ತಿಳಿದುಬಂದಿದೆ.

No Comments

Leave A Comment