Log In
BREAKING NEWS >
ಅಮರನಾಥ ಯಾತ್ರೆ ವೇಳೆ ಕದನ ವಿರಾಮ ಮುಂದುವರೆಸಲು ಸರ್ಕಾರ ನಿರ್ಧಾರ: ಭದ್ರತಾ ಸಂಸ್ಥೆಗಳ ವಿರೋಧ....

ಎರಡನೇ ಏಕದಿನ ಪಂದ್ಯ:ಭಾರತದ ಗೆಲುವಿಗೆ 231 ರನ್‌ ಗುರಿ ನೀಡಿದ ಕೀವಿಸ್‌

ಪುಣೆ: ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್‌ – ಭಾರತ ನಡುವೆ ಬುಧವಾರ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಉಭಯ ತಂಡಗಳು ಗೆಲುವಿಗಾಗಿ ಹೋರಾಟ ನಡೆಸುತ್ತಿವೆ.

ಭಾರತ ವಿರುದ್ಧ ಟಾಸ್‌ ಗೆದ್ದ ನ್ಯೂಜಿಲೆಂಡ್‌ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತು. 50 ಓವರ್‌ಗಳಲ್ಲಿ ನ್ಯೂಜಿಲೆಂಡ್‌ 9 ವಿಕೆಟ್‌ ನಷ್ಟಕ್ಕೆ 230 ರನ್‌ ಗಳಿಸಿದೆ(ಮಾರ್ಟಿನ್ ಗಪ್ಟಿಲ್ 11, ಕಾಲಿನ್ ಮನ್ರೊ 10, ಕೇನ್ ವಿಲಿಯಮ್ಸನ್ 03, ರಾಸ್ ಟೇಲರ್ 21, ಟಾಮ್ ಲಥಾಮ್ 38, ಹೆನ್ರಿ ನಿಕೊಲ್ 42, ಕಾಲಿನ್ ಡಿ ಗ್ರ್ಯಾಂಡ್‌ಹೋಮ್ 41, ಮಿಷೆಲ್ ಸ್ಯಾಂಟನರ್ 29, ಆ್ಯಡಮ್ ಮಿಲ್ನೆ 00,  ಟಿಮ್ ಸೌಥಿ ಬ್ಯಾಟಿಂಗ್‌ 25 , ಟ್ರೆಂಟ್ ಬೌಲ್ಟ್ ಬ್ಯಾಟಿಂಗ್‌ 02)

ಭಾರತದ ಪರ: ಭುವನೇಶ್ವರ್ ಕುಮಾರ್ 3, ಜಸ್‌ಪ್ರೀತ್ ಬೂಮ್ರಾ 2, ಯಜುವೇಂದ್ರ ಚಾಹಲ್ 2, ಹಾರ್ದಿಕ್ ಪಾಂಡ್ಯ 1, ಅಕ್ಷರ್ ಪಟೇಲ್ 1  ವಿಕೆಟ್‌ ಪಡೆದಿದ್ದಾರೆ.

ನ್ಯೂಜಿಲೆಂಡ್ ಎದುರಿನ ಸರಣಿ ಗೆಲುವಿನ ಕನಸು ಜೀವಂತವಾಗುಳಿಯಬೇಕಾದರೆ ಬುಧವಾರ ಇಲ್ಲಿಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ ಜಯಿಸಬೇಕಾದ ಅನಿವಾರ್ಯತೆಯಲ್ಲಿದೆ.

No Comments

Leave A Comment