Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವರಾತ್ರೆಯ "ಚ೦ಡಿಕಾ ಹೋಮ " ಕಾರ್ಯಕ್ರಮವು 19-10-2018ರ೦ದು ಜರಗಲಿದೆ....

ಐಶ್ವರ್ಯ-ಅಭಿಷೇಕ್ ಬಚ್ಚನ್ ವಾಸವಿದ್ದ ಅಪಾರ್ಟ್ ಮೆಂಟ್ ಗೆ ಬೆಂಕಿ: ತಾಯಿ ಮನೆಗೆ ಶಿಫ್ಟ್

ಮುಂಬಯಿ:  ಬಾಲಿವುಡ್ ನಟಿ ಐಶ್ವರ್ಯಾ ರೈ  ಬಚ್ಚನ್‌  ಮತ್ತು ಅಭಿಷೇಕ್‌ ಬಚ್ಚನ್‌ ವಾಸವಾಗಿರುವ ಹದಿನಾರು ಅಂತಸ್ತುಗಳ ಲಾ ಮೇರ್‌ ಅಪಾರ್ಟ್‌ಮೆಂಟಿನ ಹದಿಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಐಶ್ವರ್ಯಾ ಮತ್ತು ಅಭಿಷೇಕ್‌ ಅವರು ಬಾಂದ್ರಾದಲ್ಲಿನ ಐಶ್ವರ್ಯಾ ಅವರ ತಾಯಿ ಮನೆಗೆ ಸ್ಥಳಾಂತರಗೊಂಡಿದ್ದಾರೆ.

ಐಶ್ವರ್ಯಾ – ಅಭಿಷೇಕ್‌ ವಾಸವಾಗಿರುವ 16 ಅಂತಸ್ತುಗಳ ಲಾ ಮೇರ್‌ ಅಪಾರ್ಟ್‌ಮೆಂಟಿನ 13ನೇ ಮಹಡಿಯಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ಕೂಡಲೇ ಅಗ್ನಿಶಾಮಕದಳದವರು ನಂದಿಸುವಲ್ಲಿ ಸಫ‌ಲರಾದರು. ಐಶ್ವರ್ಯಾ ಅವರು ಈ ಅಪಾರ್ಟ್‌ಮೆಂಟಿನಲ್ಲಿ ಮದುವೆಗೆ ಮುನ್ನ ವಾಸಿಸುಕೊಂಡಿದ್ದರು. ಸಚಿನ್‌ ತೆಂಡುಲ್ಕರ್‌ ಕೂಡ ಈ ಅಪಾರ್ಟ್‌ಮೆಂಟಿನಲ್ಲೇ ವಾಸವಾಗಿದ್ದರು.

ಬೆಂಕಿ ಕಾಣಿಸಿಕೊಂಡ ಕೂಡಲೇ ನಮಗೆ ಫೋನ್‌ ಕರೆ ಬಂತು; ಒಡನೆಯೇ ನಾವು ಸ್ಥಳಕ್ಕೆ ಧಾವಿಸಿದೆವು. ಕಟ್ಟಡದಲ್ಲಿ ಅಗ್ನಿ ಶಾಮಕ ವ್ಯವಸ್ಥೆ ಸರಿಯಾದ ಸ್ಥಿತಿಯಲ್ಲಿ ಇರಲಿಲ್ಲ; ಹಾಗಿದ್ದರೂ ನಾವು ಬೆಂಕಿಯನ್ನು ಕೂಡಲೇನಿಯಂತ್ರಿಸಿ ಅದು ಇತರೆಡೆಗೆ ಹರಡುವುದನ್ನು ಯಶಸ್ವಿಯಾಗಿ ತಡೆದೆವು ಮುಂಬಯಿಯ ಮುಖ್ಯ ಅಗ್ನಿಶಾಮಕ ದಳದ ಅಧಿಕಾರಿ ರಹಾಂಗ್‌ದಾಳೆ ತಿಳಿಸಿದ್ದಾರೆ. ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ

No Comments

Leave A Comment