Log In
BREAKING NEWS >
ಚು೦...ಚು೦ ಚಳಿಯಲ್ಲಿ ಬೃಹತ್ ಜನಸ್ತೋಮದ ನಡುವೆ ಪಲಿಮಾರು ಮಠಾಧೀಶರ ದ್ವಿತೀಯ ಪರ್ಯಾಯದ ಭವ್ಯ ಮೆರಣಿಗೆ...

ಬೆಂಗಳೂರು ‘ತಾಜ್‌ಮಹಲ್‌ ಯಾವಾಗ ಕೆಡವುತ್ತೀರಾ ಹೇಳಿ, ನನ್ನ ಮಕ್ಕಳಿಗೆ ಕೊನೆಯ ಸಲ ತೋರಿಸಬೇಕು’: ಪ್ರಕಾಶ್‌ ರೈ

ಬೆಂಗಳೂರು: ಕೆಲವು ದಿನಗಳಿಂದ ತಾಜ್‌ಮಹಲ್‌ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ನಟ ಪ್ರಕಾಶ್‌ ರೈ ತಾಜ್‌ಮಹಲ್‌ ಕುರಿತು ‘ನೀವು ಯಾವಾಗ ತಾಜ್‌ಮಹಲ್‌ ಕೆಡವುತ್ತೀರಾ ಹೇಳಿ, ಯಾಕೆಂದರೆ ನನ್ನ ಮಕ್ಕಳಿಗೆ ಕೊನೆಯ ಸಲ ತಾಜ್‌ಮಹಲ್‌ ತೋರಿಸಬೇಕು’ ಎಂದು ಟ್ವೀಟ್‌ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.

ಪರ ಮತ್ತು ವಿರೋಧದ ಚರ್ಚೆಗಳ ಮಧ್ಯೆ ಕೆಲವರು ತಾಜಮಹಲ್‌ ಅನ್ನು ಕೆಡವಬೇಕು ಎನ್ನುವವರೆಗೂ ಮಾತನಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕಾಶ್ ರೈ ಉತ್ತರ ಪ್ರದೇಶ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ವ್ಯಂಗದ ಟ್ವೀಟ್ ಬಾಣ ಬೀಸಿದ್ದಾರೆ.

‘ನೀವು ತಾಜಮಹಲ್‌ನ ಬುನಾದಿ ಅಗೆಯಲು ಆರಂಭಿಸಿದ್ದೀರಿ, ಯಾವಾಗ ಅದನ್ನು ಕೆಡವುತ್ತೀರಾ ಹೇಳಿ. ನನ್ನ ಮಕ್ಕಳಿಗೆ ಆ ಅದ್ಭುತ ಕಟ್ಟಡವನ್ನು ಕೊನೆಯದಾಗಿ ತೋರಿಸ ಬಯಸುತ್ತೇನೆ’ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ. ಪ್ರಕಾಶ್‌ ರೈ ಅವರ ಈ ಟ್ವೀಟ್‌ಗೆ ಕೆಲವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

No Comments

Leave A Comment