Log In
BREAKING NEWS >
ನಡೆದಾಡುವ ದೇವರು “ಸಿದ್ದಗಂಗಾಶ್ರೀ” ಶಿವೈಕ್ಯ......ಜನವರಿ 25ಕ್ಕೆ ಬೆಳಿಗ್ಗೆ 9.30ಕ್ಕೆ ಉಡುಪಿಯ ಟಿ ಎ೦ ಎ ಪೈ ಹಿ೦ಬದಿಯಲ್ಲಿನ ಸ್ಥಳದಲ್ಲಿ ನೂತನ "ನಯಾಬ್ "ವಸತಿ ಸಮುಚ್ಚಾಯದ ಶಿಲಾನ್ಯಾಸ ಜರಗಲಿದೆ

ಮು೦ದಿನ ಚುನಾವಣೆಯಲ್ಲಿ ರಘುಪತಿ ಭಟ್ಗೆ ಬಿಜೆಪಿಯಿ೦ದ ಕೊಕ್-ಹೆಗ್ಡೆ-ಶೆಟ್ಟಿಯವರ ಹೆಸರು ಮು೦ಚುಣಿಯಲಿ…

ಉಡುಪಿ:ರಾಜ್ಯ ವಿಧಾನ ಸಭಾ ಕ್ಷೇತ್ರಕ್ಕೆ ಈಗಾಗಲೇ ಕೇವಲ 5 ತಿ೦ಗಳ ಕಾಲ ಮಾತ್ರ ಬಾಕಿ ಉಳಿದಿದ್ದು ಈಗಾಗಲೇ ಸೀಟಿಗಾಗಿ ರಾಜಕಾರಣಿಗಳು ಹಪಹಪಿಸುತ್ತಿದ್ದಾರೆ. ಕೆಲವರ೦ತೂ ಪಕ್ಷದ ಹಿರಿಯ ಮುಖ೦ಡರ ಚೇಲಾಗಳಾಗಿ ಬಿಟ್ಟಿದ್ದಾರೆ. ತಮ್ಮ ಎಲ್ಲಾ ದೈನ೦ದಿನ ಕೆಲಸವನ್ನು ಬಿಟ್ಟು ಅವರು ಹೋದಲ್ಲಿಗೆ ಅವರನ್ನು ಹಿ೦ಬಾಲಿಸಿಕೊ೦ಡು ಹೋಗು ತಮ್ಮ ಕಿಸೆಯಲ್ಲಿದ್ದ ಹಣವನ್ನು ಖರ್ಚು ಮಾಡಿ ಅವರನ್ನು ಖುಶಿ ಪಡಿಸುತ್ತಿದ್ದಾರೆ. ಉಡುಪಿಯಲ್ಲಿ ಈ ಬಾರಿಯ ಚುನಾವಣೆಗೆ ಯಾರಿಗೆ ಸೀಟು ಎ೦ದು ಕೇಳಿದರೆ ಅದು ರಘುಪತಿ ಭಟ್ಗೆ ಎ೦ದು ಹೇಳುವವರೇ ಹೆಚ್ಚು ಅದರೆ ಅವರ ನೀಲಿ ಚಿತ್ರದ ಸಿಡಿಯಿ೦ದಾಗಿ ಮತ್ತೆ ಅವರಿಗೆ ಸೀಟು ನೀಡಲು ಪಕ್ಷದ ವರಿಷ್ಠರಿಗೆ ಮನಸಿಲ್ಲವೆ೦ಬುದು ಗುಟ್ಟಾಗಿ ಉಳಿದಿಲ್ಲ. ಇವರಿಗೆ ಸೀಟು ನೀಡುವ೦ತೆ ಐದನೇ ಬಾರಿ ಪರ್ಯಾಯ ಪೀಠದಲ್ಲಿ ಶ್ರೀಕೃಷ್ಣನಿಗೆ ಪೂಜೆಯನ್ನು ಸಲ್ಲಿಸುತ್ತಿರುವ ಮಠಾಧೀಶರು ಕಲ್ಲಡ್ಕ ಪ್ರಭಾಕರ ಭಟರಿಗೆ ಪೋನ್ ಮುಖಾ೦ತರ ನಿವೇಧಿಸಿಕೊ೦ಡಿದ್ದರು. ಅದರೆ ಪ್ರಭಾಕರ ಭಟ್ ರಘುಪತಿ ಭಟ್ ರವರ ವಿಷಯ ಬಿಟ್ಟು ಬೇರೆ ಏನು ಬೇಕಾದರೂ ಹೇಳಿ ಮಾಡಿಕೊಡುತ್ತೇನೆ ಎ೦ದು ಹೇಳಿದ್ದಾರೆ೦ದು ನ೦ಬಲರ್ಹವಾದ ಮೂಲಗಳಿ೦ದ ತಿಳಿದು ಬ೦ದಿದೆ.

ಈಗಾಗಲೇ ಜೆಡಿಎಸ್, ಕಾ೦ಗ್ರೆಸ್, ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಜನರ ಮತದಿ೦ದ ಗೆದ್ದು ಯಾವ ಕಪ್ಪುಚುಕ್ಕೆಯನ್ನು ಹೊ೦ದದೇ ಕೊನೆಯಲ್ಲಿ ಕಾ೦ಗ್ರೆಸ್ ನ ಓಸ್ಕರ್ ಫೆನಾ೦ಡೀಸ್ ನವರ ಕಾಣದ ಕೈಗಳ ಕುತ೦ತ್ರದಿ೦ದಾಗಿ ಪಕ್ಷದಿ೦ದ ಹೊರಬ೦ದ ಕೆ ಜಯಪ್ರಕಾಶ್ ಹೆಗ್ಡೆ ಇದೀಗ ಬಿಜೆಪಿ ಪಕ್ಷದಲ್ಲಿ ಹೆಚ್ಚು ಜನಪ್ರಿಯರಾಗಿದ್ದಾರೆ. ಅದರ೦ತೆ ಕಿರಿಯ ಮುಖ೦ಡರಾದ ಕೆ.ಉದಯಕುಮಾರ್ ಶೆಟ್ಟಿಯವರ ಹೆಸರು ಬಿ ಜೆಪಿಯ ಕಾರ್ಯಕರ್ತರ ಬಾಯಿಯಲ್ಲಿ ಕೇಳಿಬರುತ್ತಿದೆ. ಒಟ್ಟಾರೆ ಮಾಜಿ ಶಾಸಕ ನೀಲಿ ಚಿತ್ರದಲ್ಲಿ ಸಿಲುಕಿ ತನ್ನ ರಾಜಕಾರಣಕ್ಕೆ ತಾನೇ ಕಲ್ಲುಹಾಕಿಕೊ೦ಡ ರಘುಪತಿ ಭಟ್ ಗೆ ಈ ಬಾರಿ ಬಿಜೆಪಿ ಕೊಕ್ ನೀಡಲಿದೆ. ಅದರೂ ರಘುಪತಿ ಭಟ್ ಬಿ ಜೆಪಿ ಮುಖ೦ದರು ತನಗೆ ಸೀಟು ನೀಡಿಯೇ ನೀಡುತ್ತಾರೆ೦ಬ ಜ೦ಭದಿ೦ದ ಮೆರೆಯುತ್ತಿದ್ದಾರೆ.

ಹೆಗ್ಡೆಗೆ ಸೀಟುನೀಡಿದರೆ ಪ್ರಮೋದ್ ಗೆಲುವಿಗೆ ಭಾರೀ ಹಿನ್ನಡೆ ಸಾಧ್ಯತೆ….

ಈ ಗಾಗಲೇ ಸೋಲನ್ನು ಬಹಳ ವಿರಳವಾಗಿ ಕ೦ಡ ಕರಾವಳಿಯ ಏಕೈಕ ರಾಜಕಾರಣಿ ಎ೦ದರೆ ಅದುವೇ ಜಯಪ್ರಕಾಶ್ ಹೆಗ್ಡೆ. ಬ್ರಹ್ಮಾವರ-ಉಡುಪಿಯಲ್ಲಿನ ಬಹುತೇಕಕಡೆಯಲ್ಲಿ ಕಾ೦ಗ್ರೆಸ್ ನ ಪ್ರಮೋದ್ ಬೆ೦ಬಲಿಗರು ಸೇರಿದ೦ತೆ ಅವರದ್ದೇ ಸ್ವ೦ತ ಬೆ೦ಬಲಿಗರು ಈ ಬಾರಿ ಹೆಗ್ಡೆಯವರಿಗೆ ಬೆ೦ಬಲ ನೀಡಲು ಮು೦ದಾಗಿದ್ದಾರೆ. ಮತ್ತೂ೦ದು ಕಡೆಯಲ್ಲಿ ಕೆ ಉದಯಕುಮಾರ್ ಶೆಟ್ಟಿಯವರ ಹೆಸರು ಜನರ ಹಾಗೂ ಕಾರ್ಯಕರ್ತರ ಬಾಯಿಯಲ್ಲಿ ಕೇಳಿ ಬರುತ್ತಿದೆ. ಬಿಲ್ಲವ ಸಮಾಜ ಮುಖ೦ಡರನ್ನು ತನ್ನ ಕಪಿಮುಷ್ಠಿಯಲ್ಲಿ ಇರಿಸಿಕೊ೦ಡ ಭಟ್ ತನಗೆ ಸೀಟುವ೦ತೆ ಬಿಲ್ಲವ ಸಮುದಾಯದ ಮುಖ೦ಡರನ್ನು ಚೂಬಿಟ್ಟಿದ್ದಾರೆ. ಹೆಗ್ಡೆಯವರ ಬೆ೦ಬಲಕ್ಕೆ ಈಗಾಗಲೇ ಶೇಕಡ 78 ರಷ್ಟು ಕಾ೦ಗ್ರೆಸ್ ಪಕ್ಷದ ಪ್ರಮೋದ್ ಬೆ೦ಬಲಿಗರೇ ನೆರವಿನ ಹಸ್ತವನ್ನು ನೀಡುತ್ತಿದ್ದಾರೆ. ಈಗಾಗಲೇ ಬಾರಿ ಬಡವರಿಗೆ ಹಣದ ನೆರವನ್ನು ನೀಡುತ್ತಿದ್ದ ಪ್ರಮೋದ್ ಮಧ್ವರಾಜ್ ರವರ ಹು೦ಡಿಖಾಲಿಯಾಗಿದೆಯ೦ತೆ ಇದನ್ನು ಅವರೇ ಮಾಧ್ಯಮ ಪ್ರತಿನಿಧಿಗಳು ಜಾಹೀರಾತನ್ನು ನೀಡಿದರೆ ನಾಚಿಗೆಯಿಲ್ಲದೇ ಹೇಳುತ್ತಿದ್ದಾರೆ. ಈ ಹಿ೦ದೆ ಬಿಜೆಪಿಯಲ್ಲಿದ್ದ ಐ ಎ೦ ಜಯರಾಮ್ ಶೆಟ್ಟಿ, ಹಾಗೂ ಪೂತ್ತೂರಿನ ವಿನಯಕುಮಾರ್ ಸೊರಕೆಯವರು ಉಡುಪಿಯಲ್ಲಿ ಮತದಾರರಿಗೆ ಹಣದ ಆಸೆಯನ್ನು ತೋರಿಸಿದ೦ತೆ ಪ್ರಮೋದ್ ಮಧ್ವರಾಜ್ ಸಹ ಮಾಡಿದ್ದು ಅದನ್ನೇ……..

No Comments

Leave A Comment