Log In
BREAKING NEWS >
ವೇತನ ಹೆಚ್ಚಳ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 30 ಮತ್ತು 31ರಂದು ಬ್ಯಾಂಕ್‌ ನೌಕರರು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ....

ಸಮಾಧಿಯಿಂದ ಶವ ಮೇಲಕ್ಕೆತ್ತಿ ಚಿನ್ನ ದೋಚಿದರು!!

ಕಲಬುರಗಿ: ಹಣ ಕಂಡ್ರೆ ಹೆಣ ಬಾಯಿ ಬಿಡುತ್ತೇ ಅನ್ನೋ ಮಾತಿದೆ. ಆದರೆ ಇಲ್ಲಿ ಚಿನ್ನಕ್ಕಾಗಿ ಹೆಣವನ್ನೂ ಬಿಟ್ಟಿಲ್ಲ. ಅಳಂದದ ಖಜೂರಿ ಗ್ರಾಮದಲ್ಲಿ ನಡೆದ ಘಟನೆಯೊಂದರಲ್ಲಿ ಹಣದ ಆಸೆಗೆ ಬಿದ್ದ ಖದೀಮರು ಶವವನ್ನೇ ಮೇಲಕ್ಕೆತ್ತಿ ಚಿನ್ನಾಭರಣವನ್ನು ದೋಚಿದ್ದಾರೆ.

5 ದಿನಗಳ ಹಿಂದೆ ಪ್ರೇಮಾ ಬಾಯಿ ಎನ್ನುವ ವೃದ್ಧೆ ಮೃತಪಟ್ಟಿದ್ದರು. ಅವರನ್ನು 50 ಗ್ರಾಂ ಚಿನ್ನಾಭರಣಗಳ ಸಮೇತ ಗ್ರಾಮಸ್ಥರು ಸಮಾಧಿ ಮಾಡಿದ್ದರು. ಆದರೆ ಸೋಮವಾರ ರಾತ್ರಿ ಸಮಾಧಿಯನ್ನು ಅಗೆದು ಶವದ ಮೇಲಿದ್ದ ಚಿನ್ನಾಭರಣಗಳನ್ನು ದೋಚಿ ಖದೀಮರು ಪರಾರಿಯಾಗಿದ್ದಾರೆ. ದುಷ್ಕರ್ಮಿಗಳು ಶವವನ್ನು ಹಾಗೆಯೇ ಬಿಟ್ಟು ತೆರಳಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ಅಳಂದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಕ್ಕಳಿಲ್ಲದ ಪ್ರೇಮಾ ಬಾಯಿಯ ಚಿನ್ನಾಭರಣಕ್ಕಾಗಿ ಅಂತ್ಯ ಸಂಸ್ಕಾರಕ್ಕೆ ಮುನ್ನ ಸಂಬಂಧಿಕರ ನಡುವೆ ಜಗಳ ನಡೆದಿದ್ದು, ಹೀಗಾಗಿ ಯಾರಿಗೂ ಬೇಡ, ಸಮಾಧಿಯಲ್ಲಿರಲಿ ಎಂದು ಚಿನ್ನಾಭರಣಗಳ ಸಮೇತ ಮಣ್ಣು ಮಾಡಲಾಗಿತ್ತು.

ಈ ಬಗ್ಗೆ ತಿಳಿದವರೇ ಸಮಾಧಿ ಅಗೆದು ಚಿನ್ನಾಭರಣ ದೋಚಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

No Comments

Leave A Comment