Log In
BREAKING NEWS >
ಜನವರಿ 25ಕ್ಕೆ ಬೆಳಿಗ್ಗೆ 9.30ಕ್ಕೆ ಉಡುಪಿಯ ಟಿ ಎ೦ ಎ ಪೈ ಹಿ೦ಬದಿಯಲ್ಲಿನ ಸ್ಥಳದಲ್ಲಿ ನೂತನ "ನಯಾಬ್ "ವಸತಿ ಸಮುಚ್ಚಾಯದ ಶಿಲಾನ್ಯಾಸ ಜರಗಲಿದೆ

ಡೆನ್ಮಾರ್ಕ್ ಓಪನ್: ಫೈನಲ್ ಗೇರಿದ ಭಾರತದ ಕಿಡಾಂಬಿ ಶ್ರೀಕಾಂತ್

ಒಡೆನ್ಸ್‌: ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಸೂಪರ್ ಸೀರಿಸ್ ಪ್ರೀಮಿಯರ್ ಟೂರ್ನಿಯಲ್ಲಿ ತಮ್ಮ ಅದ್ಬುತ ಪ್ರದರ್ಶನ ಮುಂದುವರೆಸಿರುವ ಭಾರತದ ಕಿಡಾಂಬಿ ಶ್ರೀಕಾಂತ್ ಶನಿವಾರ ಫೈನಲ್ ಪ್ರವೇಶ ಮಾಡಿದ್ದಾರೆ.

ನಿನ್ನೆ ನಡೆದ ಸೆಮಿಫೈನಲ್ ಹಣಾಹಣಿಯಲ್ಲಿ ಶ್ರೀಕಾಂತ್ ಹಾಂಕಾಂಗ್‌ ನ ವಾಂಗ್ ವಿಂಗ್ ಕೀ ವಿನ್ಸೆಂಟ್ ವಿರುದ್ಧ 21–18, 21–17 ನೇರ ಸೆಟ್ ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿದರು. ತೀವ್ರ ಕುತೂಹಲ ಕೆರಳಿಸಿದ್ದ  ಸೆಮಿಫೈನಲ್ ಪಂದ್ಯ ಬರೋಬ್ಬರಿ 39 ನಿಮಿಷಗಳ ವರೆಗೂ ಸಾಗಿತು. ಈ ಪಂದ್ಯಕ್ಕೂ ಮುನ್ನ ನಾಲ್ಕು ಬಾರಿ ಪರಸ್ಪರ ಎದುರಾಗಿದ್ದ ಶ್ರೀಕಾಂತ್ ಹಾಗೂ ವಾಂಗ್ ವಿಂಗ್ ಕೀ ವಿನ್ಸೆಂಟ್ ತಲಾ ಎರಡೆರಡು ಪಂದ್ಯಗಳನ್ನು ಗೆದ್ದಿದ್ದರು.  ಹೀಗಾಗಿ ಈ ಪಂದ್ಯ ಕ್ರೀಡಾಭಿಮಾನಿಗಳಲ್ಲಿ ಕುತೂಹಲ ಕೆರಳಿಸಿತ್ತು.

ಇನ್ನು ಪಂದ್ಯದ ಬಳಿಕ ಮಾತನಾಡಿದ ಶ್ರೀಕಾಂತ್, ಪ್ರಸ್ತುತ ಜಯ ನನ್ನಲ್ಲಿನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ವಾಂಗ್ ವಿಂಗ್ ಕೀ ವಿನ್ಸೆಂಟ್ ಮತ್ತು ನನ್ನ ಪ್ರದರ್ಶನ ಒಂದೇ ತೆರನಾಗಿದೆಯಾದರೂ ಪಂದ್ಯದ ನಡುವೆ ನಾನು ಕೆಲ  ತಪ್ಪುಗಳನ್ನು ಮಾಡಿದ್ದೆ. ಆದರೆ ಕೂಡಲೇ ಸರಿಪಡಿಸಿಕೊಂಡ ಕಾರಣ ಜಯ ಒಲಿಯಿತು. ಫೈನಲ್ ನಲ್ಲಿ ಲೀ ಯನ್ನು ಎದುರಿಸಬೇಕಿದ್ದು, ನಿಜಕ್ಕೂ ಆತ ಕಠಿಣ ಎದುರಾಳಿ ಎಂದು ಶ್ರೀಕಾಂತ್ ಹೇಳಿದ್ದಾರೆ.

No Comments

Leave A Comment