Log In
BREAKING NEWS >
ನಾಡಿನ ಸಮಸ್ತ ಜನತೆಗೆ,ಓದುಗರಿಗೆ,ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ಕರಾವಳಿಕಿರಣ ಡಾಟ್ ಕಾ೦ ಬಳಗದ ಯುಗಾದಿ ಹಬ್ಬದ ಶುಭಾಶಯಗಳು.......ಮಾರ್ಚ್ 23 ರಿಂದ ಏಪ್ರಿಲ್ 6 ವರಗೆ SSLC ಪರೀಕ್ಷೆ ನಡೆಯಲಿದೆ. ಪರೀಕ್ಷೆ ದಿನಾ ಬೆಳಿಗ್ಗೆ 9 ರಿಂದ 1:30 ರ ವರೆಗೆ ನಡೆಯಲಿದೆ........ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ

ಇನ್‌ಸ್ಟಾಗ್ರಾಂ ನಲ್ಲಿ ಡೆತ್‌ನೋಟ್‌: ವಿದ್ಯಾರ್ಥಿನಿ ಆತ್ಮಹತ್ಯೆ

ಹೈದರಾಬಾದ್‌ : ತನ್ನ ತಾಯಿ ತನ್ನ ಮೇಲೆ ಪ್ರತಿಯೊಂದಕ್ಕೂ ಸಿಟ್ಟಾಗಿ ತನಗೆ ಯದ್ವಾತದ್ವಾ ಬೈಯುತ್ತಾಳೆ ಎಂಬ ಕಾರಣಕ್ಕೆ 21ರ ಹರೆಯದ ಬಿ ಟೆಕ್‌ ಫೈನಲ್‌ ವಿದ್ಯಾರ್ಥಿನಿ, ಸಿ ಮೌನಿಕಾ ಎಂಬಾಕೆ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

“ನಾನು ಸಂತಸದಿಂದ ಇರುವುದನ್ನು ಕಾಣಲು ಕೆಲವರಿಗೆ ಸಾಧ್ಯವಾಗುತ್ತಿಲ್ಲ. ಅನ್ಯರ ಬೈಗುಳಗಳಿಂದ ನಾನು ರೋಸಿ ಹೋಗಿದ್ದೇನೆ. ಈಗಾಗಲೇ ಸಾಕಷ್ಟು ಅನಭವಿಸಿದ್ದೇನೆ; ಇನ್ನು ಸಹಿಸಲಾರೆ; ಇಲ್ಲಿಗೇ ನನ್ನ ಬದುಕನ್ನು ಕೊನೆಗೊಳಿಸುತ್ತಿದ್ದೇನೆ’ ಎಂಬ ಬರಹವನ್ನು ಮೌನಿಕಾ ಇನ್‌ಸ್ಟಾಗಾಂ ನಲ್ಲಿ ಹಾಕಿದ್ದಾಳೆ.

ಇನ್ನೊಂದು ಪ್ರಕರಣದಲ್ಲಿ ಶಾಹೀದ್‌ ಹುಸೇನ್‌ ಎಂಬಾತ “ನನ್ನ ಕೆಲವು ಸಂಬಂಧಿಗಳು ಹಣಕ್ಕಾಗಿ ನನ್ನನ್ನು ಪೀಡಿಸುತ್ತಿದ್ದು ಅದರಿಂದ ನಾನು ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಬರೆದಿಟ್ಟು ತನ್ನ ಸೆಲ್‌ಫೋನ್‌ ನಲ್ಲೇ ತನ್ನ ಆತ್ಮಹತ್ಯೆಯನ್ನು ಸಂಪೂರ್ಣವಾಗಿ ಚಿತ್ರೀಕರಿಸಿಕೊಂಡು ಇಹಲೋಕ ತ್ಯಜಿಸಿದ್ದಾನೆ.

ಹುಸೇನ್‌ ಶವದ ಬಳಿ ಆತ ಬರೆದಿಟ್ಟಿದ್ದ ಡೆತ್‌ ನೋಟ್‌ ಸಿಕ್ಕಿದೆ. ಆದರಲ್ಲಿ ಆತ ತನಗೆ ಹಣಕ್ಕಾಗಿ ಪೀಡಿಸುತ್ತಿರುವ ತನ್ನ ಐದು ಸಂಬಂಧಿಗಳನ್ನು ಹೆಸರಿಸಿದ್ದಾನೆ.

ಪೊಲೀಸರು ಮೇಲಿನ ಎರಡೂ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

No Comments

Leave A Comment