Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ಉತ್ತರಾಖಂಡ್: ಪೆಟ್ರೋಲ್-ಡಿಸೇಲ್ ಮೇಲೆ 2% ವ್ಯಾಟ್ ಇಳಿಕೆ

ನವದೆಹಲಿ: ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಅಬಕಾರಿ ಸುಂಕವನ್ನು 2 ರುಪಾಯಿ ಕಡಿತಗೊಳಿಸಿದ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರಗಳು ವ್ಯಾಟ್ ದರ ಕಡಿತಗೊಳಿಸುತ್ತಿವೆ.

ಮೊದಲಿಗೆ ಗುಜರಾತ್, ಮಹಾರಾಷ್ಟ್ರ ಮತ್ತು ಹಿಮಾಚಲ ಪ್ರದೇಶಗಳು ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ವ್ಯಾಟ್ ಅನ್ನು ಕಡಿತಗೊಳಿಸಿದ್ದವು ಇದೀಗ ಉತ್ತರಖಂಡ್ ಸಹ 2 ರುಪಾಯಿ ವ್ಯಾಟ್ ಅನ್ನು ಕಡಿತಗೊಳಿಸಿದೆ. 2 ರುಪಾಯಿ ವ್ಯಾಟ್ ಅನ್ನು ಕಡಿತಗೊಳಿಸಿರುವುದಾಗಿ ಉತ್ತರಖಂಡ ಹಣಕಾಸು ಸಚಿವ ಪ್ರಕಾಶ್ ಪಂತ್ ಹೇಳಿದ್ದಾರೆ.

ಮಹಾರಾಷ್ಟ್ರ ಸರ್ಕಾರವೂ ಗುಜರಾತ್ ಮಾದರಿಯಲ್ಲೇ ಪೆಟ್ರೋಲ್, ಡಿಸೇಲ್ ಮೇಲಿನ ವ್ಯಾಟ್ ನ್ನು ಕಡಿತಗೊಳಿಸಿದ್ದು, ಪೆಟ್ರೋಲ್ ಮೇಲಿನ ವ್ಯಾಟ್ ನ್ನು 2 ರೂಪಾಯಿ ಹಾಗೂ ಡಿಸೇಲ್ ಮೇಲಿನ ವ್ಯಾಟ್ ನ್ನು 1 ರೂಪಾಯಿ ಕಡಿಮೆಗೊಳಿಸಿತ್ತು.

ಗುಜರಾತ್ ನಂತರ ಪೆಟ್ರೋಲ್, ಡಿಸೇಲ್ ಮೇಲಿನ ವ್ಯಾಟ್ ದರವನ್ನು ಇಳಿಕೆ ಮಾಡಿದ 2 ನೇ ರಾಜ್ಯ ಮಹಾರಾಷ್ಟ್ರವಾಗಿದೆ. ಇದಾದ ನಂತರ ಹಿಮಾಚಲ ಪ್ರದೇಶ ಸಹ ವ್ಯಾಟ್ ಅನ್ನು ಕಡಿತಗೊಳಿಸಿತ್ತು.

No Comments

Leave A Comment