Log In
BREAKING NEWS >
ಉಡುಪಿ:ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಮಹೋತ್ಸವದ ಶುಭಾರoಭಕ್ಕೆ ಕ್ಷಣಗಣನೆ....ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ;೧೧೮ನೇ ಭಜನಾ ಸಪ್ತಾಹ ಮಹೋತ್ಸವದ 1`ದಿನ ಶ್ರೀದೇವರಿಗೆ ಮತ್ಸ್ಯಲoಕಾರ

ಕ್ರೂರ ಕೃತ್ಯ:ಪುಣೆಯಲ್ಲಿ ಬೀದಿ ನಾಯಿಗಳನ್ನು ಜೀವಂತ ಸುಟ್ಟರು!

ಪುಣೆ : ಇಲ್ಲಿ ನಡೆದ ಅತ್ಯಂತ ಆಘಾತಕಾರಿ ಮತ್ತು ಕ್ರೂರ ಕೃತ್ಯವೊಂದರಲ್ಲಿ ಬೀದಿ ನಾಯಿಗಳ ಮಾರಣ ಹೋಮ ಮಾಡಲಾಗಿದ್ದು, ನಾಲ್ಕು ಬೀದಿನಾಯಿಗಳನ್ನು ಒಟ್ಟಾಗಿ ಸಜೀವವಾಗಿ ದಹಿಸಲಾಗಿದೆ.

ಎನ್‌ಜಿಓ ಸಂಸ್ಥೆಯೊಂದು ದುಷ್ಕೃತ್ಯದ ಬಗ್ಗೆ ಹೋರಾಟಕ್ಕಿಳಿದಿದ್ದು  ಇದುವರೆಗೆ 21 ಬೀದಿನಾಯಿಗಳ ಶವಗಳು ಪತ್ತೆಯಾಗಿದ್ದು, ಕೆಲವು ಪೊದೆಗಳಲ್ಲಿ ಮೂಳೆಗಳು ಪತ್ತೆಯಾಗಿವೆ. ಈ ಬಗ್ಗೆ ಪ್ರಾಣಿ ಪ್ರಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಲ್ಕು ಬೀದಿ ನಾಯಿಗಳನ್ನು ಒಟ್ಟಾಗಿ ಕಟ್ಟಿ 500 ಮೀಟರ್‌ನಷ್ಟು ನಿರ್ದಯವಾಗಿ ಎಳೆದೊಯ್ದು ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಕೊಲ್ಲಲಾಗಿದ್ದು, 16 ನಾಯಿಗಳಿಗೆ ವಿಷಪ್ರಾಶನ ಮಾಡಿಸಿ ಕೊಲ್ಲಲಾಗಿದೆ.

ನಾಯಿಗಳ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಒಯ್ಯಲಾಗಿದ್ದು ,ವರದಿ ಬಂದ ಬಳಿಕ ಎಫ್ಐಆರ್‌ ದಾಖಲಿಸಿ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.

No Comments

Leave A Comment