Log In
BREAKING NEWS >
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶ್ರೀಶಾರದಾ ಮಹೋತ್ಸವ ಸಮಿತಿಯ ಆಶ್ರಯದಲ್ಲಿ ಪೂಜಿಸಲ್ಪಟ್ಟ ಶ್ರೀಶಾರದಾ ವಿಗ್ರಹ ಇ೦ದು ವಿಸರ್ಜನಾ ಮೆರವಣಿಗೆಗೆ ಸಕಲ ಸಿದ್ದತೆ........ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಕ್ರಿಕೆಟ್‌ನಲ್ಲಿ ಬದಲಾವಣೆಯ ಪರ್ವ: ಟಿ20 ಆಯ್ತು, ಮುಂದೆ ಟಿ10 ಕ್ರಿಕೆಟ್

ದುಬೈ: ದಿನ ಕಳೆದಂತೆ ಕ್ರಿಕೆಟ್ ನಲ್ಲಿ ಹಲವು ಬದಲಾವಣೆಗಳು ಆಗುತ್ತಿವೆ. ಐದು ದಿನಗಳ ಟೆಸ್ಟ್, ಏಕದಿನ ಪಂದ್ಯ ಆಗಿ ಬದಲಾವಣೆ ಆಯಿತು. ನಂತರ ಟಿ20 ಧಮಾಕ ಶುರುವಾಯಿತು ಮುಂದೆ ಟಿ10 ಅಬ್ಬರ ಶುರುವಾಗಲಿದೆ.

ಟಿ20 ಕ್ರಿಕೆಟ್ ವಿಶ್ವದಾದ್ಯಂತ ಜನಪ್ರಿಯಗೊಳ್ಳುತ್ತಿರುವಾಗಲೇ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಟಿ10(ಟೆನ್-ಟೆನ್) ಕ್ರಿಕೆಟ್ ಲೀಗ್ ಆರಂಭಗೊಳ್ಳುತ್ತಿದೆ.

ಶಾರ್ಜಾದಲ್ಲಿ ಡಿಸೆಂಬರ್ 21ರಿಂದ 24ರವರೆಗೂ ಟಿ10 ಲೀಗ್ ನಡೆಯಲಿದೆ. ಪಂದ್ಯಾವಳಿಯಲ್ಲಿ ಕೇವಲ 10 ಓವರ್ ಗಳ ಆಟ ನಡೆಯಲಿದ್ದು 90 ನಿಮಿಷಗಳಲ್ಲಿ ಪಂದ್ಯ ಮುಕ್ತಾಯಗೊಳ್ಳಲಿದೆ.

ಈ ಟಿ10 ಲೀಗ್ ನಲ್ಲಿ ಮಾಜಿ ಕ್ರಿಕೆಟಿಗರು ಪಾಲ್ಗೊಳ್ಳಲಿದ್ದಾರೆ. ಪಂದ್ಯಾವಳಿಯಲ್ಲಿ ಒಟ್ಟು 4 ತಂಡಗಳು ಸೆಣಸಾಡಲಿವೆ ಎನ್ನಲಾಗಿದೆ. ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್, ಪಾಕಿಸ್ದಾನದ ಶಾಹೀದ್ ಆಫ್ರಿದಿ, ಶ್ರೀಲಂಕಾದ ಕುಮಾರ ಸಂಗಾಕ್ಕಾರ ಹಾಗೂ ಇಂಗ್ಲೆಂಡ್ ನ ಇಯಾನ್ ಮೊರ್ಗನ್ ಆಡುವ ಸಾಧ್ಯತೆ ಇದೆ.

No Comments

Leave A Comment