Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಸುಡಾನ್’ನಲ್ಲಿ ಬಂಡುಕೋರರು-ಭದ್ರತಾ ಪಡೆಗಳ ನಡುವೆ ಘರ್ಷಣೆ: 100 ಜನರ ಸಾವು

ಅಂಕಾರಾ: ದಕ್ಷಿಣ ಸುಡಾನ್’ನಲ್ಲಿ ಬಂಡುಕೋರರು ಹಾಗೂ ಭದ್ರತಾ ಪಡೆಗಳ ಘರ್ಷಣೆ ಏರ್ಪಟ್ಟಿದ್ದು, ಘರ್ಷಣೆಯಲ್ಲಿ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆಂದು ಗುರುವಾರ ತಿಳಿದುಬಂದಿದೆ.

ಮಾಜಿ ಉಪಾಧ್ಯಕ್ಷ ರಿಕ್ ಮ್ಯಾಚರ್ ಅನುಯಾಯಿಗಳು ಹಾಗೂ ಭದ್ರತಾ ಪಡೆಗಳ ನಡುವೆ ದಕ್ಷಿಣ ಸುಡಾನ್ ಈಶಾನ್ಯ ಭಾಗದಲ್ಲಿ ಘರ್ಷಣೆ ಏರ್ಪಟ್ಟಿದ್ದು, ಘರ್ಷಣೆಯಲ್ಲಿ ಐವರು ಯೋಧರು ಹಾಗೂ 91 ಬಂಡುಕೋರರು ಸಾವನ್ನಪ್ಪಿದ್ದಾರೆಂದು ಸೇನಾ ವಕ್ತಾರ ಬರಿಕ್, ಜನರಲ್ ಲುಲ್ ರುಯಿ ಕೋಂಗ್ ಅವರು ಹೇಳಿದ್ದಾರೆ.

ಭಾನುವಾರದಿಂದಲೇ ಬಂಡುಕೋರರು ಹಾಗೂ ಭದ್ರತಾ ಪಡೆಗಳ ನಡುವೆ ಘರ್ಷಣೆ ಏರ್ಪಟ್ಟಿತ್ತು. ಈ ಘರ್ಷಣೆ ಮಂಗಳವಾರದವರೆಗೂ ಮುಂದುವರೆದಿತ್ತು. ರೀಕ್ ಮ್ಯಾಚರ್ ಅವರ ಬೆಂಬಲಿಗರು ಸೇನಾ ಪಡೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಪ್ರತಿದಾಳಿ ನಡೆಸಿ 91 ಮಂದಿಯನ್ನು ಹತ್ಯೆ ಮಾಡಿದ್ದೇವೆಂದು ತಿಳಿಸಿದ್ದಾರೆ.

No Comments

Leave A Comment