Log In
BREAKING NEWS >
ಅಗಸ್ಟ್ 16ರಿ೦ದ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ....

ಉಡುಪಿ: ಎಂ.ಜಿ.ಎಂ ಕಾಲೇಜಿನ “ಸನ್ಮತಿ” ವಾರ್ಷಿಕ ಸಂಚಿಕೆ ಅನಾವರಣ

ಉಡುಪಿ: ವಿದ್ಯಾಸಂಸ್ಥೆಯ ವಾರ್ಷಿಕ ಸಂಚಿಕೆಗಳು, ಶಾಲಾ- ಕಾಲೇಜುಗಳ ಇತಿಹಾಸವನ್ನು ದಾಖಲಿಸುವ ಗ್ರಂಥವೂ ಆಗಿರುತ್ತದೆ. ಇಂತಹ ಸಂಚಿಕೆಗಳು ಇಂದು ಓದಿ ನಾಳೆ ಬಿಸಾಡುವ ಹೊತ್ತಿಗೆಗಳಲ್ಲ .ಹಾಗಾಗಿ ಇಂತಹ ಸಂಚಿಕೆಗಳ ಸಂಗ್ರಹ ಮತ್ತು ರಕ್ಷಣೆ ನಮ್ಮ‌ಜವಾಬ್ದಾರಿಯೂ ಹೌದು ವಿದ್ಯಾರ್ಥಿಗಳ ಬರವಣಿಗೆಗೆ ಉತ್ತಮ ವೇದಿಕೆಯನ್ನು ಕಲ್ಪಿಸಬಲ್ಲ ಅವಕಾಶವೂ ಇದರಲ್ಲಿ ಅಡಗಿದೆ.ಈ ‌ನಿಟ್ಟಿನಲ್ಲಿ.ಎಂ.ಜಿ.ಎಂ. ಕಾಲೇಜಿನ ಸನ್ಮತಿಗೆ ಅದರದ್ದೇ ಆದ ಇತಿಹಾಸವಿದೆ ಸಾಹಿತ್ಯ ಪೂರ್ಣವಾದ ಸಂಚಿಕೆಯಾಗಿ ಹೊರಬಂದಿರುವ ಶ್ಲಾಘನೀಯವೆಂದು ಹಿರಿಯ ಭಾಷಾತಜ್ಞ ಪ್ರೊ. ಡಾ.ಎನ್ ತಿರುಮಲ್ಲೇಶ್ವರ ಭಟ್ ಅಭಿಪ್ರಾಯಿಸಿದರು‌. ಉಡುಪಿ ಎಂ.ಜಿ.ಎಂ.ಕಾಲೇಜಿನ ವಾರ್ಷಿಕ ಸಂಚಿಕೆ ಸನ್ಮತಿ ಅನಾವರಣ ಗೊಳಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲೆ ಪ್ರೊ.ಕುಸುಮಾ ಕಾಮತ್.ಕೆ ವಹಿಸಿ. ಓದುವ ಅಭ್ಯಾಸವನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು. ಆನಂತರ ನಿಧಾನವಾಗಿ ಬರೆಯುವ ಕಲೆಯನ್ನು ಬೆಳೆಸಿಕೊಳ್ಳಿ . ಅನುಭಾಮೃತವಾದ ಬರವಣಿಗೆ ಓದುಗರನ್ನು ಹೆಚ್ಚು ಸೆಳೆಯುತ್ತದೆ ಎಂದು ನುಡಿದರು‌.

ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ. ಮಾಲತಿದೇವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಚಿಕೆಯ ಪ್ರಧಾನ ಸಂಪಾದಕಿ‌ ಡಾ.ಸಂಧ್ಯಾ.ಆರ್. ನಂಬಿಯಾರ್. ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಕಾಮರ್ಸ್ ವಿಭಾಗದ ಮುಖ್ಯಸ್ಥ ಡಾ.ಸುರೇಶ್ ರಮಣ ಮಯ್ಯ ಅತಿಥಿಗಳನ್ನು ಗೌರವಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಪುತ್ತಿ ವಸಂತಕುಮಾರ್‌ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

No Comments

Leave A Comment